ಚಳ್ಳಕೆರೆ ನ್ಯೂಸ್ :
ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅರೆ ಬೆತ್ತಲೆಯಾಗಿ
ಒಡಾಡಿದ ಅಪರಿಚಿತ
ಕುಡಿದ ಅಮಲಿನಲ್ಲಿ ಚಿತ್ರದುರ್ಗ ನಗರದ ವೃತ್ತಿಪರ ಹಾಸ್ಟೆಲ್
ಬಳಿ ಅರೆ ಬೆತ್ತಲೆಯಾಗಿ ಅಪರಿಚಿತನೊಬ್ಬ ಓಡಾಡಿದ್ದನ್ನು ಕಂಡ
ಹಾಸ್ಟೆಲ್ ನ ವಿದ್ಯಾರ್ಥಿನಿಯರು ಭಯ ಭೀತಗೊಂಡ ಘಟನೆ
ನಡೆದಿದೆ.
ಇದರಿಂದ ಹಾಸ್ಟೆಲ್ ಸಿಬ್ಬಂದಿ ಹಾಗೂ ಸಾರ್ವಜನಿಕರು
ಅವನನ್ನು ಹಿಡಿದು ಆಟೋದಲ್ಲಿ ಕೂರಿಸಿ ಪೊಲೀಸರಿಗೆ ಕರೆ
ಮಾಡಿದ್ದು, ಪೊಲೀಸರು ಅಪರಿಚಿತ ವ್ಯಕ್ತಿಯನ್ನು ಬಡಾವಣೆ ಠಾಣೆಗೆ
ಕರೆದೊಯ್ದು ವಿಚಾರಣೆ ನಡೆಸಿ ನಂತರ ಅವನನ್ನು ನಿರಾಶ್ರಿತರ
ಕೇಂದ್ರಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ