ಚಳ್ಳಕೆರೆ ನ್ಯೂಸ್ :
ವೈದ್ಯರಾದ ಡಾ. ಸುಧೀಂದ್ರ ಬಾಬುಗೆ ತರಾಟೆಗೆ ತೆಗೆದುಕೊಂಡ ಶಾಸಕ
ನಾನು ಕ್ಷೇತ್ರದ ಶಾಸಕನಿದ್ದೇನೆ, ಜವಾಬ್ದಾರಿಯುತ ಸ್ಥಾನದಲ್ಲಿದ್ದು
ಜನರ ಸೇವೆ ಮಾಡುತ್ತಿದ್ದೇನೆ.
ಸಮಸ್ಯೆಗಳು ಆದಾಗ ನನ್ನ ಬಳಿ
ಹೇಳಬೇಕು ಅದು ಬಿಟ್ಟು ಆಸ್ಪತ್ರೆ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು
ಮಾಡುತ್ತಿರುವುದು ನಿಮ್ಮ ವೃತ್ತಿಗೆ ಶೋಭೆ ತರುವುದಿಲ್ಲ ಎಂದು
ಶಾಸಕ ಎನ್ ವೈ ಗೋಪಾಲಕೃಷ್ಣ ಸರ್ಕಾರಿ ಆಸ್ಪತ್ರೆ ವೈದ್ಯರಾದ
ಡಾ. ಸುಧೀಂದ್ರ ಬಾಬುಗೆ ತರಾಟೆಗೆ ತೆಗೆದುಕೊಂಡರು.
ಮೊಳಕಾಲ್ಮೂರು ಪಟ್ಟಣದ
ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ವೈದ್ಯರ ನಡೆ
ಕುರಿತು ಕೆಂಡಮಂಡಲವಾದರು.