ಚಳ್ಳಕೆರೆ ನ್ಯೂಸ್ :
ತಾರತಮ್ಯ ಮಾಡದೆ ಪರಿಹಾರದ ಹಣ ಕೊಡಿ:
ರೈತರಿಂದ ಪ್ರತಿಭಟನೆ
ಬರ ಪರಿಹಾರದ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು,
ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕೆಂದು,
ರಾಜ್ಯ ರೈತ
ಸಂಘದ ವಾಸುದೇವ ಮೇಟಿ ಬಣದ ಕಾರ್ಯಕರ್ತರು ಒತ್ತಾಯಿಸಿ,
ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪರಿಹಾರದ ಹಣ 35
ಸಾವಿರವನ್ನು, ಗೋಮಾಳ, ಅರಣ್ಯ ಭೂಮಿ, ಬಗರ್ ಹುಲುಬನಿ
ಕರಾಬು, ಸೇಂದಿವನ ವನ್ನು ಉಳುಮೆ ಮಾಡಿರುವವರಿಗೂ
ಪರಿಹಾರ ಕೊಡಬೇಕು.
ನೀರಾವರಿ ಮತ್ತು ಬೇಸಿಗೆ ಬಿತ್ತನೆ
ಮಾಡಿರುವ ರೈತರಿಗೂ ವಿಮಾ ಕಂಪನಿಗಳು ತಾರತಮ್ಯ
ಮಾಡಬಾರದು ಎಂದು ಆಗ್ರಹಿಸಿದರು.