[1:32 PM, 5/20/2024] ರಾಮುದೊಡ್ಮನೆ ಚಳ್ಳಕೆರೆ👍: ಚಳ್ಳಕೆರೆ ನ್ಯೂಸ್ :

ಬರದ ನಾಡಿಗೆ ಮಳೆರಾಯ ಕರುಣೆ ತೋರಿದ್ದು ಕಳೆದ‌ ಮೂರು ದಿನಗಳಿಂದ ಹಾಗಾಗ ಸುರಿಯುವ ಮುಂಗಾರು ಮಳೆಗೆ ರೈತ ನಿಟ್ಟುಸಿರು ಬಿಟ್ಟಿದ್ದಾನೆ.

ಅದರಂತೆ ತಾಲೂಕಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದ ತೋಟಗಾರಿಕೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ರೈತರ ಬೆಳೆಗಳು ಸಂಕಷ್ಟದಲ್ಲಿವೆ.

ಹೌದು
ಚೌಳಕೆರೆ ಗ್ರಾಮದ ಎಂ.ಬಸವರಾಜ್ ತಂದೆ ಮಲ್ಲಯ್ಯ ಇವರ ಜಮೀನಿನಲ್ಲಿ ಮೇ.20 ರಂದು ತಡರಾತ್ರಿ ಸುರಿದ ಬಾರಿ ಮಳೆಗಾಳಿಗೆ ಟೊಮ್ಯಾಟೊ ಬೆಳೆ ಸಂಪೂರ್ಣವಾಗಿ ಹಾನಿಯಾಗಿದ್ದು ಅಪಾರ ನಷ್ಟವನ್ನುಂಟು ಮಾಡಿದೆ

ಚಳ್ಳಕೆರೆ ತಾಲೂಕಿನ
ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೌಳಕೆರೆ ಗ್ರಾಮದ ರೈತ ಎಂ.ಬಸವರಾಜ್ ತಂದೆ ಮಲ್ಲಯ್ಯ ರಿ.ಸಂ. 71/p1ರಲ್ಲಿ 6 ಎಕರೆ 20 ಗುಂಟೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆ ಹಾಕಿದ್ದರು.

ತಡ ರಾತ್ರಿ ಸುರಿದ ಬಾರಿ ಮಳೆಗೆ ಜಮೀನಿನ ಏರಿ ಹೊಡೆದು ಹೊಲದೊಳಗೆ ನೀರು ನುಗ್ಗಿದ್ದು ಬೆಳೆ ಹಾಗೂ ಬೆಳೆಯ ಸುತ್ತ ಹಾಕಿದ್ದ ಟೊಮೊಟೊ ಸಸಿ ನೆಲಕಚ್ಚಿದ್ದು ಇದರಿಂದ ಸಾಲ ಸೂಲ ಮಾಡಿ ಟೊಮ್ಯಾಟೊ ಬೆಳೆ ಹಾಕಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತನಿಗೆ ರಾತ್ರಿ ಸುರಿದ ಮಳೆ ಅಪಾರನಷ್ಟವನ್ನುಂಟು ಮಾಡಿದೆ.

ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಬೆಳೆ ನಷ್ಟ ಪರಿಹಾರವನ್ನು ನೀಡಲು ರೈತ ಎಂ ಬಸವರಾಜ್ ತಂದೆ ಮಲ್ಲಯ್ಯ ಜಮೀನಿಗೆ ಭೇಟಿ ನೀಡಿ ಸರಕಾರದಿಂದ ಬೆಳೆ ನಷ್ಟ ಪರಿಹಾರ ಕೊಡಿಸ ಬೇಕಿದೆ ಒತ್ತಾಯಿಸಿದ್ದಾರೆ.
[1:32 PM, 5/20/2024] ರಾಮುದೊಡ್ಮನೆ ಚಳ್ಳಕೆರೆ👍:

Namma Challakere Local News
error: Content is protected !!