ಚಳ್ಳಕೆರೆ ನ್ಯೂಸ್ :

ಬರದ ನಾಡಿನಲ್ಲಿ ಹಾಲಿನಂತೆ ಧುಮುಕಿದ ಜಲಪಾತ
ಮಳೆ ಬಂದಾಗ ಅನೇಕ ಭಾಗಗಳಲ್ಲಿ ಜನಪ್ರಿಯ ಜಲಪಾತಗಳನ್ನು
ನೋಡುವುದು ಸಾಮಾನ್ಯವಾಗಿದೆ.

ಆದರೆ ಸತತವಾಗಿ ಬರಗಾಲಕ್ಕೆ ತುತ್ತಾಗುವ
ತಾಲೂಕಿನಲ್ಲಿ ಜಲಪಾತ ನೋಡುವುದೇ ವಿಶೇಷ.

ಈ ವರ್ಷದ
ಬರಗಾಲದಿಂದ ತತ್ತರಿಸಿ ಹೋದ ತಾಲೂಕಿನ ಜನರಿಗೆ ಬರದ
ನಾಡಿನಲ್ಲಿ ಜಲಪಾತವು ಹಾಲಿನಂತೆ ಸಮೃದ್ಧಿಯಾಗಿ ದುಮ್ಮಿಕ್ಕಿ
ಹರಿಯುತ್ತಿದೆ.

ಈ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತಿದೆ.

ಅದರಂತೆ
ತಾಲ್ಲೂಕಿನ ಮೇಲಿನಕಣಿವೆ ಸಮೀಪದ ಕೃಷ್ಣರಾಜಪುರ ಕಾಯ್ದಿಟ್ಟ
ಅರಣ್ಯ ಪ್ರದೇಶದಲ್ಲಿ ನಿನ್ನೆ ಸುರಿದ ಬಾರಿ ಮಳೆಗೆ ದೊಡ್ಡ ಪ್ರಮಾಣದ
ಜಲಪಾತ ಸೃಷ್ಟಿಯಾಗಿದೆ.

ಜಲಪಾತನೀರ ಧಾರೆಯ ಸೊಬಗಿಗೆ ಮನಸೋತ
ಜನರು
ತಾಲ್ಲೂಕಿನ ಮೇಲಿನಕಣಿವೆ ಸಮೀಪದ ಕೃಷ್ಣರಾಜಪುರ ಕಾಯ್ದಿಟ್ಟ
ಅರಣ್ಯ ಪ್ರದೇಶದಲ್ಲಿ ಸುರಿದ ಬಾರಿ ಮಳೆಗೆ ದೊಡ್ಡ ಪ್ರಮಾಣದ
ಜಲಪಾತ ಸೃಷ್ಟಿಯಾಗಿದೆ.

ರಾಂಪುರದಿಂದ ಬಾಂಡ್ರಾವಿಗೆ ಹೋಗುವ
ಮಾರ್ಗದಲ್ಲಿ ಬೆಟ್ಟದ ಮೇಲೆ ಈ ಜಲಪಾತವನ್ನು ಕಾಣಬಹುದಾಗಿದೆ.

ಕೃಷ್ಣರಾಜಪುರ ಕಾಯ್ದಿಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಉತ್ತಮ
ಮಳೆಯಾಗುತ್ತಿದ್ದು ಜಲಪಾತ ಸೃಷ್ಟಿಯಾಗಿದೆ.

ಬರಕ್ಕೆ ಹೆಸರಾಗಿರುವ
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಇಲ್ಲಿ ಹೊರತುಪಡಿಸಿದಲ್ಲಿ ಬೇರೆ
ಎಲ್ಲಿಯೂ ಇಂತಹ ಜಲಪಾತ ನೋಡಲು ಸಿಗುವುದಿಲ್ಲ.

About The Author

Namma Challakere Local News

You missed

error: Content is protected !!