ಚಳ್ಳಕೆರೆ ನ್ಯೂಸ್ :
ರಕ್ತ ನಿಧಿಕೇಂದ್ರ ಆರಂಭಕ್ಕೆ ಸೂಚಿಸಿದ್ದೇನೆ: ಸಚಿವ
ಸುಧಾಕರ್
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ರಕ್ತ ನಿಧಿ ಕೇಂದ್ರವು
ಸ್ಥಗಿತಗೊಂಡಿದ್ದು, ಕೂಡಲೇ ಅದನ್ನು ಆರಂಭಿಸುವಂತೆ ಜಿಲ್ಲಾ
ಶಸ್ತ್ರ ಚಿಕಿತ್ಸಕರಿಗೆ ಸೂಚಿಸಿದ್ದೇನೆ
ಎಂದು ಜಿಲ್ಲಾ ಉಸ್ತುವಾರಿ
ಸಚಿವ ಡಿ. ಸುಧಾಕರ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಮಾಧ್ಯಮಗಳೊಂದಿಗೆ ಮಾತಾಡಿದರು, ನಾನು ಕೂಡ ಇದನ್ನು
ಗಮನಿಸಿದ್ದೇನೆ.
ರಕ್ತ ಜೀವವನ್ನು ಉಳಿಸುವಂತದ್ದು, ಧೀರ್ಘ ಕಾಲದ
ಮಾದರಿ ನೀತಿಸಂಹಿತೆಯಿಂದ ಆರಂಭಿಸಲಾಗಿಲ್ಲ.
ಕೂಡಲೇ ಕ್ರಮ
ವಹಿಸಲು ಸೂಚಿಸಿದ್ದೇನೆ ಎಂದರು.
ಇನ್ನೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಬಹಳಷ್ಟು ದಕ್ಷವಾಗಿದೆ.
ಗೃಹ ಮಂತ್ರಿ ಪರಮೇಶ್ವರ್ ಅವರು ಉತ್ತಮ ರೀತಿಯಲ್ಲಿ
ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.
ಸುಧಾಕರ್ ಹೇಳಿದರು.
ನಾನು ಕೂಡ ಜಗದೀಶ್ ಶೆಟ್ಟರ್
ಮುಖ್ಯ ಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿದ್ದವನು,
ಆಗ ಕಾನೂನು ಸುವ್ಯವಸ್ಥೆ ಹೇಗಿತ್ತು ಎಂದು ಗೊತ್ತಿದೆ.
ಸಿಎಂ
ಪರಿಶೀಲನೆಯಲ್ಲಿ ಪರಮೇಶ್ವರ್ ಅವರು ಉತ್ತಮ ರೀತಿಯಲ್ಲಿ
ನಿಭಾಯಿಸುತ್ತಿದ್ದಾರೆ ಎಂದರು.