ಚಳ್ಳಕೆರೆ ನ್ಯೂಸ್ :
ಮದಕರಿ ನಾಯಕರ ಸರಳ ಹಾಗೂ ಸಾಂಕೇತಿಕ
ಆಚರಣೆ ಮಾಡುತ್ತೇವೆ
ಇದೇ ವರ್ಷದಿಂದ ಪಾಳೇಗಾರರ ಪ್ರಮುಖ ನಾಯಕ
ಮದಕರಿನಾಯಕರ ಪುಣ್ಯ ಸ್ಮರಣೆಯನ್ನು ಆಚರಿಸುತ್ತಿದ್ದೇವೆ
ಎಂದು ಚಿತ್ರದುರ್ಗ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ
ಹೆಚ್ ಜೆ ಕೃಷ್ಣ ಮೂರ್ತಿ ಹೇಳಿದರು.
ಅವರು ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು
. ಈ ಬಾರಿ ಸ್ಮರಣೆ ಹಾಗೂ
ಜಯಂತಿಯನ್ನು ಸಾಂಕೇತಿಕ ಮತ್ತು ಸರಳವಾಗಿ ಮಾಡುತ್ತಿದ್ದು,
ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ.
ಇದು ನಾಯಕ ಸಮಾಜ ಅಷ್ಟೆ ಅಲ್ಲ, ಎಲ್ಲಾ ಸಮಾಜದವರು
ಭಾಗವಹಿಸಬೇಕು ಎಂದರು.