ಚಳ್ಳಕೆರೆ ನ್ಯೂಸ್ :
ಬಾರಿ ಮಳೆಗೆ 10 ಮನೆಗಳಿಗೆ ಹಾನಿ ಓರ್ವ ಬಾಲಕನಿಗೆ
ಗಾಯ
ಚಿತ್ರದುರ್ಗದಲ್ಲಿ ತಡರಾತ್ರಿ ಸುರಿದ ಬಾರಿ ಮಳೆಗೆ, ಮಲ್ಲಾಪುರ
ಗ್ರಾಮದಲ್ಲಿ ಬಾರಿ ಅನಾಹುತ ಸಂಭವಿಸಿದೆ.
ತಡರಾತ್ರಿ
ಸುರಿದ ಜೋರು ಮಳೆ ಗಾಳಿ, ಗುಡುಗು ಸಿಡಿಲಿಂದಾಗಿ ಮನೆ
ಮೇಲ್ಬಾವಣಿಗಳು ಹಾರಿ ಹೋಗಿವೆ.
ಕೆಲವೆಡೆ ಮನೆ ಸಮೇತ ಶೀಟಿನ
ಮೇಲ್ಬಾವಣಿ ಕುಸಿದು ಬಿದ್ದಿದೆ.
ಸುಮಾರು 10 ಮನೆಗಳಿಗೆ ಈ ರೀತಿ
ಹಾನಿಯಾಗಿದ್ದು, ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.
ಓರ್ವ ಬಾಲಕನಿಗೆ ಶೀಟು ಬಡಿದು ತಲೆಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ
ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.