ಚಳ್ಳಕೆರೆ ನ್ಯೂಸ್ :
ಸಡಗರ ಸಂಭ್ರಮದಿಂದ ಜರುಗಿದ ದೇವಿಕೆರೆ
ಬೀರಲಿಂಗೇಶ್ವರ ಜಾತ್ರೆ
ಶ್ರೀ ಬೀರಲಿಂಗೇಶ್ವರ ಸ್ವಾಮಿ ಜಾತ್ರೆಯನ್ನು ನೂರಾರು ಭಕ್ತರು
ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಆಚರಣೆ ಮಾಡಿದರು.
ಹೊಸದುರ್ಗ ತಾಲೂಕು ಶ್ರೀರಾಮಪುರ ಹೋಬಳಿಯ ದೇವಿಕೆರೆ
ಗ್ರಾಮದಲ್ಲಿ ಇಂದು ಬೀರಲಿಂಗೇಶ್ವರ ಸ್ವಾಮಿ ಜಾತ್ರೆಯನ್ನು
ಹಮ್ಮಿಕೊಳ್ಳಲಾಯಿತು.
ಶ್ರೀ ಬೀರಲಿಂಗೇಶ್ವರ ಸ್ವಾಮಿ ಜಾತ್ರಾ
ಪ್ರಯುಕ್ತ ದೇವಾಲಯದಲ್ಲಿ ವಿವಿಧ ಪೂಜೆಗಳು ನೆರವೇರಿದವು.
ಭಕ್ತರು ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ನೂರಾರು
ಭಕ್ತರು ಈ ಜಾತ್ರೆಯಲ್ಲಿ ಭಾಗಿಯಾಗಿಯಾದರು.