ಚಳ್ಳಕೆರೆ ನ್ಯೂಸ್ :

ಬಾರಿ ಗಾಳಿಗೆ 15 ಎಕರೆ ಬಾಳೆಬೆಳೆ ಹಾನಿ

ಬಯಲು ಸೀಮೆಯಲ್ಲಿ ‌ಬರ ಸಿಡಿಲು ಬಡಿದಂತಾಗಿದೆ‌ ರೈತನಿಗೆ

ಬಾರಿ ಬಿರುಗಾಳಿಗೆ ತಾಲೂಕಿನ ಕಾಟಂದೇವರಕೋಟೆ ಗ್ರಾಮದ ರೈತ
ಎ. ರವಿಕುಮಾರ್ ಇವರ 30 ಎಕರೆ ಪದೇಶದಲ್ಲಿ ಬೆಳೆಯಲಾದ
ಫಸಿಲಿಗೆ ಬಂದಿದ್ದ ಬಾಳೆ ಬೆಳೆ ಹಾನಿಗೊಳಗಾಗಿದೆ.

ಇದರಿಂದಾಗಿ
ರೈತನಿಗೆ ಸುಮಾರು ಮೂವತ್ತು ಲಕ್ಷ ರೂಪಾಯಿ ನಷ್ಟವಾಗಿದೆ.

ರೈತರ ತನ್ನ 30 ಎಕರೆ ಪ್ರದೇಶದಲ್ಲಿ ಬಾಳೆಯನ್ನು ಬೆಳೆಯಲಾಗಿತ್ತು.
ಸಂಜೆ ಬೀಸಿದ ಗಾಳಿಗೆ ಬಾಳೆಗೊನೆಗಳು ಮುರಿದು ಬಿದ್ದಿವೆ.

ಸುಮಾರು 15 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆ ಆನೆಗೊಳದಾಗಿದೆ.
ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

40 ಎಕರೆ ಬಾಳೆ, 10 ಎಕರೆ ಅಡಿಕೆ ಬಾಳೆ ಗಾಳಿಗೆ
ಹಾನಿಯಾಗಿದೆ

ಬಿರುಗಾಳಿಗೆ ತಾಲೂಕಿನ ಹಲವು ಗ್ರಾಮಗಳಲ್ಲಿ 10 ಎಕರೆ ಅಡಿಕೆ
ಹಾಗೂ 40 ಎಕರೆ ಬಾಳೆ ಬೆಳೆ ನಾಶವಾಗಿದೆ.

ಇನ್ನು ಘಟನಾ
ಸ್ಥಳಕ್ಕೆ ತೋಟಗಾರಿಕೆ ಸಹಾಯಕ ನಿರ್ದೇಶಕ ಆರ್ ವಿರೂಪಾಕ್ಷಪ್ಪ
ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಂತರ ಡಿಜಿಟಲ್
ಮಾಧ್ಯಮದೊಂದಿಗೆ ಮಾತನಾಡಿ, ಬಿರುಗಾಳಿಗೆ ತಾಲೂಕಿನ
ಕೆಡಿಕೋಟೆ ಹಾಗೂ ಹೋಬಳಪುರ ವಿವಿಧ ಗ್ರಾಮಗಳಲ್ಲಿ ಬಾಳೆ
ಅಡಿಕೆ ಇತರೆ ಬೆಳೆಗಳು ಹಾನಿಗೊಳಗಾಗಿವೆ.

ವರದಿಯನ್ನ
ಸರ್ಕಾರಕ್ಕೆ ನೀಡಲಾಗುವುದು ಎಂದರು.

About The Author

Namma Challakere Local News
error: Content is protected !!