ಚಳ್ಳಕೆರೆ : ಸಿಡಿಲು ಬಡಿದು ಕಿರಿಗಾಹಿಯೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಮೃತ ಯುವಕ ಯಶವಂತ(19).
ಭಾನುವಾರ ಸಂಜೆ 4 ಗಂಟೆಗೆ ಜೋರಾಗಿ ಬೀಸಿದ ಗಾಳಿ ಹಾಗೂ ಮಳೆ‌ಜೋರಾಗಿತ್ತು ಕುರಿಕಾಯಲು ಹೋಗಿದ್ದ ಯುವಕ ಯಶವಂತ ಮಳೆಯನ್ನು ಕಂಡು ಕುರಿಗಳನ್ನು ಹೊಡೆದುಕೊಂಡು ಮರಳಿ‌ ಮನೆಕಡೆಗೆ ವಾಪಸ್ ಬರುವಾಗ ದೇವರೆಡ್ಡಿಹಳ್ಳಿ ಗ್ರಾಮದ ಹೊರವಲಯದಲ್ಲಿ ಹುಣಸೆಮರದ ಕೆಳಗಡೆ ನಿಂತಿದ್ದಾನೆ.

ಇದೇವೇಳೆ ಸಿಡಿಲು ಬಡಿದು ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ವಿಷಯ ತಿಳಿದು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ತಳಕು ಪಿಎಸ್ ಐ. ಮಾರುತಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.

ಈದೇ ರೀತಿಯಾಗಿ ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟವ್ವನಹಳ್ಳಿ ಅನ್ನಪೂರ್ಣೇಶ್ವರಿ ಡಾಬಾ ಮುಂಭಾಗ ಮರ ಬಿದ್ದಿವೆ ಭೀಮನಕೆರೆ, ಭತ್ತಯ್ತನಹಟ್ಟಿ ವರವು, ನಾಯಕನಹಟ್ಟಿ ಮಾದೇವಪುರ ಗಜ್ಜುಗಾನಹಳ್ಳಿ ರಾಮಸಾಗರ ಓಬಯ್ಯನಹಟ್ಟಿ ಮಲ್ಲೂರಹಳ್ಳಿ ಕುದಾಪುರ ಬೋಸೆದೇವರಹಟ್ಟಿ ನಲಗೇತನಹಟ್ಟಿ ಉಪ್ಪಾರಹಟ್ಟಿ ಎತ್ತಿನಹಟ್ಟಿ ಗೌಡಗೆರೆ ಜೋಗಿಹಟ್ಟಿ ಚನ್ನಬಸಯ್ಯನಹಟ್ಟಿ ಜಾಗನೂರಹಟ್ಟಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಭಾರಿ ಗಾಳಿ ಮಳೆಯಿಂದ ರಸ್ತೆ ಮೇಲೆ ಮರಗಳು, ವಿದ್ಯುತ್ ಕಂಬಗಳು ರಸ್ತೆ ಮೇಲೆ ಉರುಳಿರುವುದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ನಾಯಕನಹಟ್ಟಿ ವಿದ್ಯುತ್ ಸರಬರಾಜು ಘಟಕ ಶಾಖಾಧಿಕಾರಿ ಎನ್ ಬಿ ಬೋರಯ್ಯ ನವರು ವಿದ್ಯುತ್ ಕಂಬಗಳು ಅಲ್ಲಲ್ಲಿ ಬಿದ್ದ ಕಾರಣ ತಮ್ಮ ಸಿಬ್ಬಂದಿಗಳೊಂದಿಗೆ ಮಳೆಯಲ್ಲಿ ನೆನೆಯುತ್ತಾ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ

ಈ ವೇಳೆ ಮಾಧ್ಯಮದೊಂದಿಗೆ ಶಾಖಾಧಿಕಾರಿ ಬೋರಣ್ಣ ಮಾತನಾಡಿ ಮಳೆರಾಯನ ಆರ್ಭಟದಿಂದ 26 ವಿದ್ಯುತ್ ಕಂಬಗಳು ನೆಲಕಚ್ಚಿವೆ ಈ ಗ್ರಾಮಗಳಲ್ಲಿ ಬೋಸೆದೇವರಹಟ್ಟಿ ನಲಗೇತನಹಟ್ಟಿ ನೇರಲಗುಂಟೆ ಕಾಟವ್ವನಹಳ್ಳಿ ಯರಮಂಚನಹಟ್ಟಿ ಹಳ್ಳಿಗಳಲ್ಲಿ ಸುಮಾರು ಹತ್ತರಿಂದ ಹನ್ನೆರಡು ಟ್ರಾನ್ಸ್ ಫಾರ್ಮ್ ಪೆಟ್ಟಿಗೆಗಳು ಸುಟ್ಟಿವೆ ಎಂದು ಮಾಹಿತಿ ನೀಡಿದರು

Namma Challakere Local News
error: Content is protected !!