ಚಳ್ಳಕೆರೆ ನ್ಯೂಸ್ :
ತಾಯಿಯ ಹರಕೆ ತೀರಿಸಲು ಬೇವಿನ ಸೀರೆಯುಟ್ಟ
ಯುವತಿಯರು
ಚಿತ್ರದುರ್ಗದ ಪಾಳೇಗಾರರ ಅಧಿದೇವತೆ, ಏಕನಾಥೇಶ್ವರಿ
ಜಾತ್ರೆಯೂ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆಡೆಯುತಿದೆ.
ಇಂದು ಬೇವು ಬೇಟೆಯ ಆಚರಣೆ ನೆಡೆಯುತ್ತಿದ್ದು, ಯುವತಿಯರು
ಹರಕೆ ತೀರಿಸಲು ಬೇವಿನ ಉಡುಗೆಯನ್ನು ತೊಟ್ಟು, ದೇವಿ ದರ್ಶನ
ಪಡೆದುಕೊಂಡು, ತಾವು ಅಂದುಕೊಂಡ ಹರಕೆಯನ್ನು ತೀರಿಸಿದರು.
ದೇವಿಯ ದರ್ಶನ ಪಡೆಯಲು, ಗುಂಪು ಗುಂಪಾಗಿ ದೇವಿ ಪಾದಗಟ್ಟೆ
ಕಡೆಗೆ ಧಾವಿಸುತ್ತಿದ್ದು, ಕಂಡು ಬಂದಿತು.