ಚಳ್ಳಕೆರೆ ನ್ಯೂಸ್ :
ಚಿತ್ರದುರ್ಗ ಜಿಲ್ಲೆಯ ಗಡಿಭಾಗದಲ್ಲಿ ಮದ್ಯ ಮಾರಾಟ ನಿಷೇಧ
ಮೇ 7ರಂದು ದಾವಣಗೆರೆ, ಬಳ್ಳಾರಿ ಮತ್ತು ವಿಜಯನಗರ
ಜಿಲ್ಲೆಗಳಲ್ಲಿ ಮತದಾನ ನಡೆಯಲಿರುವುದರಿಂದ ಕಾನೂನು ಮತ್ತು
ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಮೇ 05ರ ಸಂಜೆ 6
ಗಂಟೆಯಿಂದ ಮೇ 7ರ ಮಧ್ಯರಾತ್ರಿ 12ರ ವರೆಗೆ ಚಿತ್ರದುರ್ಗ ಜಿಲ್ಲೆ
ಗಡಿಭಾಗದ 5 ಕಿ. ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬಗೆಯ
ಮದ್ಯದ ಅಂಗಡಿಗಳು,
ಯಾವುದೇ ಬಾರ್ ಅಂಡ್ ರೆಸ್ಟೋರೆಂಟ್,
ಕ್ಲಬ್ ಮತ್ತು ಹೋಟೆಲ್, ಡಾಬಾಗಳಲ್ಲಿ ಮದ್ಯ ಸಾಗಾಣಿಕೆ,
ಶೇಖರಣೆ ಮತ್ತು ಮದ್ಯ ಮಾರಾಟ ನಿಷೇಧಿಸಿ ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್
ಆದೇಶಿಸಿದ್ದಾರೆ.