ಚಳ್ಳಕೆರೆ ನ್ಯೂಸ್ :
ಪಂಪ್ ಮಾಡುವ ಮೂಲಕ ಸೂಗೂರು ಕೆರೆಗೆ ಹರಿದ
ವೇದಾವತಿ ನೀರು
ಚಿತ್ರದುರ್ಗ ಜಿಲ್ಲೆಯಲ್ಲಿ ಬರ ಆವರಿಸಿದೆ ಕೊಳವೆ ಬಾವಿಗಳಲ್ಲಿ
ನೀರಿಲ್ಲದಾಗಿದೆ. ಇದರಿಂದ ಹಿರಿಯೂರಿನ ವೇದಾವತಿ ನದಿಯ
ಹೊಸಹಳ್ಳಿ ಬ್ಯಾರೇಜ್ ನಿಂದ ಧರ್ಮಪುರ ಹೋಬಳಿಯ
ಸೂಗೂರು ಕೆರೆಗೆ ನೀರು ಪಂಪ್ ಮಾಡಲಾಗುತ್ತಿದೆ.
ಪಂಪ್ ಮಾಡುವ ಮೂಲಕ, ನೀರು ಬಿಟ್ಟಿದ್ದು, ಸೂಗೂರು ಕೆರೆಗೆ ಅಲ್ಪ
ಪ್ರಮಾಣದ ನೀರು ನಿಂತಿದ್ದು, ಜನ ಜಾನುವಾರುಗಳಿಗೆ ಕುಡಿಯಲು
ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ರೈತ
ಮುಖಂಡ ಕಸವನಹಳ್ಳಿ ರಮೇಶ್ ಹೇಳಿದರು.