ಚಳ್ಳಕೆರೆ ನ್ಯೂಸ್ : ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ಸ್ಥಿತಿ
ಹೌದು ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗೋಶಾಲೆ ಸಮೀಪದ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ
ಚಳ್ಳಕೆರೆ ಮಾರ್ಗದಿಂದ ಬೈಕ್ ಸವಾರ ಹಾಗೂ ದೊಡ್ಡುಳ್ಳಾರ್ತಿ ಮಾರ್ಗವಾಗಿ ಸಾರಿಗೆ ಬಸ್ ಬರುವಾಗ ತಿರುವಿನಲ್ಲಿ ಈ ಘಟನೆ ಜರುಗಿದೆ.
ಬೈಕ್ ನಲ್ಲಿದ್ದ ಚಿತ್ರನಾಯ್ಕನಹಳ್ಳಿ ಗ್ರಾಮದ ಈರಣ್ಣ 42 ವರ್ಷ ಹಾಗೂ ವಿರೂಪಾಕ್ಷ 32 ವರ್ಷ ಎಂಬ ಇಬ್ಬರಿಗೆ ಗಂಭೀರವಾಗಿ ಘಾಯಗಳಾಗಿದ್ದು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಚಿತ್ರದುರ್ಗ ಜಿಲ್ಲಾಸ್ವತ್ರೆಗೆ ರವಾನಿಸಲಾಗಿದೆ.
ಇನ್ನೂ ಈ ಅಪಘಾತಕ್ಕೆ ಸಾರಿಗೆ ಬಸ್ ಚಾಲಕನ ಅತೀವೇಗವೇ ಅಥವಾ ಬೈಕ್ ಸವಾರನ ಅಜಾಗ್ರತೆಯೇ ಎಂಬುದು ಪೊಲೀಸ್ ತನಿಖೆಯಿಂದ ಹೊರಬಿಳಲಿದೆ.
ಒಟ್ಟಾರೆ ಬಾರೀ ವಾಹನಗಳು ವೇಗವನ್ನು ನಿಯಂತ್ರಿಸಬೇಕು ಇಲ್ಲವಾದರೆ ಇಂತಹ ಸಣ್ಣ ಸವಾರರು ಪ್ರಾಣ ಉಳಿದಿತೆ ಎಂಬುದು ಸ್ಥಳಿಯರ ಅಭಿಪ್ರಾಯವಾಗಿತ್ತು…