ಚಳ್ಳಕೆರೆ ನ್ಯೂಸ : ಮಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ರೈತನಿಗೆ ಮತ್ತೆ ಬರಸಿಡಿಲು ಬಡಿದಂತಾಗಿದೆ
ಹೌದು ಮಳೆ ಬಾರದೆ ಬೆಳೆಗಳಿಗೆ ನೀರಿಲ್ಲದೆ ಒಣಗಲು
ಪ್ರಾರಂಬಿಸಿದ್ದರಿಂದ
ಈ ಒಣ ಹವೆ ವಿಪರೀತ ಬಿಸಿಲಿನ ತಾಪಕ್ಕೆ ಬೆಳೆಗಳು ಬೆಂಕಿಗೆ ಅಹುತಿಯಾಗಿವೆ.
ಸಂಪೂರ್ಣವಾಗಿ
ಸುಟ್ಟು ಕರಕಲಾಗುವ ಜಗೆ ರೈತರ ಬದುಕು ಬೆಂಕಿಯಲ್ಲಿ ಬೆಂದಂತಾಗಿದೆ.
ಈ ಘಟನೆ ಚಳ್ಳಕೆರೆ ತಾಲೂಕಿನ ಪರಶುರಾಮಪುರ ಗ್ರಾಮದ
ಕೊಂಡೇರ ಪರಮೇಶ್ವರಪ್ಪ ಅವರ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ
ಲಕ್ಷಾಂತರ ರೂ ನಷ್ಟವಾಗಿರುವುದು ವರದಿಯಾಗಿದೆ.
ಪರಶುರಾಮಪುರ-ಪಾವಗಡ ಮಾರ್ಗದ ಮುಖ್ಯರಸ್ತೆಯ
ಹೊಂದಿಕೊಂಡಿರುವ ರೈತ ಕೊಂಡೇರ ಪರಮೇಶ್ವರಪ್ಪ ಅವರ ಅಡಕೆ,
ತೆಂಗು, ಮಾವಿನ ತೋಟಕ್ಕೆ ಶುಕ್ರವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ತಗುಲಿ
ಫಸಲಿಗೆ ಬಂದಿದ್ದ ಹುಣಸೆ ಮರಗಳು 14, ಮಾವು 8 ನಿಂಬೆ 2, ತೆಂಗು 2
ಮರಗಳಿಗೆ ಬೆಂಕಿ ತಗುಲಿ ಎರಡು ಲಕ್ಷ ರೂಗಳಿಗೂ ಅಧಿಕ ನಷ್ಟವಾಗಿದೆ.
ಸ್ಥಳದಲ್ಲಿದ್ದ ರೈತರು ಚಳ್ಳಕೆರೆ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ
ಮಾಡಿದ ಹಿನ್ನೆಲೆ ಚಳ್ಳಕೆರೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಸಕಾಲಕ್ಕೆ ಬಂದು ಅಗ್ನಿ ನಂದಿಸುವಲ್ಲಿ
ಯಶಸ್ವಿಯಾಗಿದ್ದು ಹೆಚ್ಚಿನ ಅನಾವುತ ತಪ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಕೊಂಡೇರ ಪರಮೇಶಣ್ಣ ಅಗ್ನಿಶಾಮಕ
ಠಾಣಾಧಿಕಾರಿ ಬಿ ಜಯಣ್ಣ, ಸಿಬ್ಬಂದಿ ತಿಪ್ಪೇಶ್, ಕೊಂಡೋಜಿ,
ಸಂತೋಷ್, ಅರವಿಂದ, ಆಕಾಶ, ಇತರರಿದ್ದರು.