ಚಳ್ಳಕೆರೆ ನ್ಯೂಸ್ :
2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಬ್ರೇಕ್ ಹಾಕಿದ ಅಬಕಾರಿ ಇಲಾಖೆ
ಆದರೆ ಅಬಕಾರಿ ಪೊಲೀಸ್ ಕಣ್ ತಪ್ಪಿಸಿ ಅಕ್ರಮ ಮಧ್ಯ ಮಾರಾಟ ಮಾಡುವುದು ಕಂಡುಬಂದ ಹಿನ್ನಲೆಯಲ್ಲಿ ತಾಲೂಕಿನ ಗೋಪನಹಳ್ಳಿ ಗ್ರಾಮದ ಅಂಜನ ಮೂರ್ತಿ ಎಂಬಾತನು ತನ್ನ ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಉದ್ದೇಶದಿಂದ ಎರಡು ರೆಟ್ಟಿನ ಪೆಟ್ಟಿಗೆಗಳಲ್ಲಿ 16.740 ಲೀ ಅಕ್ರಮ ಮದ್ಯವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.
ಇನ್ನೂ ಪೊಲೀಸ್ ಇಕಾಖೆ ಅಕ್ರಮ ಮಧ್ಯ ವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿದೆ.
ಜಿಲ್ಲಾ ಅಬಕಾರಿ ಉಪ ಆಯುಕ್ತರು, ಹಾಗೂ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ ಮತ್ತು ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜು ಚಳ್ಳಕೆರೆ ವಲಯ ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ರೇಖಾ ಎಸ್.ಹೆಚ್ ರವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಟ್ಟು ಮದ್ಯ= 16.470ಲೀ
ಒಟ್ಟು ಮದ್ಯದ ಮೌಲ್ಯ7,440 ರೂ
ಸದರಿ ಆರೋಪಿಯನ್ನು CRPC ಕಲಾಂ 41(ಎ)(1) ರಡಿಯಲ್ಲಿ ನೋಟೀಸ್ ನೀಡಿ ಬಿಡುಗಡೆ ಗೊಳಿಸಲಾಗಿದೆ ಎನ್ನಲಾಗಿದೆ.
ಚಳ್ಳಕೆರೆ ವಲಯ ಸಿಬ್ಬಂದಿಗಳಾದ ಅಬಕಾರಿ ಕಾನ್ಸ್ಟೇಬಲ್ ಸೋಮಶೇಖರ್ ಮತ್ತು ನಾಗರಾಜು ಇತರರು ಇದ್ದರು.