ಚಳ್ಳಕೆರೆ : ಮುಂಗಾರು ಹಂಗಾಮು ಪ್ರಾರಂಭವಾಗುವ ಮುನ್ನವೇ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸಮಗ್ರವಾಗಿ ತಾಲೂಕಿನಲ್ಲಿ ಕೀಟನಾಶಕಗಳನ್ನು ಹೊದಗಿಸಿ ಎಂದು ಸಹಾಯಕ ಕೃಷಿ ಅಧಿಕಾರಿ ಜೆ.ಅಶೋಕ ಹೇಳಿದ್ದಾರೆ
ನಗರದ ಸಹಯಾಕ ಕೃಷಿ ಇಲಾಖೆ ಸಭಾಂಗಣದಲ್ಲಿ ಕೃಷಿ ಪರಿಕರ ಮಾರಾಟದಗಾರರ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಮುಂಬರುವ ಮುಂಗಾರು ಹಂಗಾಮುನಲ್ಲಿ ತಾಲೂಕಿನ ಯಾವೊಬ್ಬ ರೈತನೂ ಬೀಜ ಹಾಗೂ ಗೊಬ್ಬರ ಇಲ್ಲ ಎನ್ನಬಾರದು ಆದ್ದರಿಂದ ನಿಮಗೆ ಬೇಡಿಕೆ ಎಷ್ಟಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬಿತ್ತನೆಬೀಜ ಹಾಗೂ ಗೊಬ್ಬರ ದಾಸ್ತಾನು ಮಾಡಿಕೊಳ್ಳಿ, ತಾಲೂಕಿನಲ್ಲಿ ಈ ಬಾರಿ ಸುಮಾರು ಒಂದು ಸಾವಿರದ ಐನೂರು ಟನ್ ಗೊಬ್ಬರ ಶೇಖರಣೆಗೆ ಶಿಪಾರಸ್ಸು ಮಾಡಿದ್ದೆವೆ ಎಂದರು.
ಜಾರಿದಳದ ಸಹಯಾಕ ನಿದೇರ್ಶಕ ಲೋಕೆಶಪ್ಪ ಮಾತನಾಡಿ, ತಾಲೂಕಿನಲ್ಲಿ ಎಲ್ಲಾ ರಸ ಗೊಬ್ಬರ ವ್ಯಾಪಾರಿಗಳು ರೈತರ ಹಿತ ಕಾಯುವಲ್ಲಿ ಈಬಾರಿ ಸಿದ್ದತೆ ಮಾಡಿಕೊಳ್ಳಬೇಕು, ಕೇವಲ ಮಾರಾಟದ ಭಾವನೆ ತಾಳದೆ ರೈತರೊಟ್ಟಿಗೆ ಉತ್ತಮವಾದ ಒಡನಾಟ ಬೆಳೆಸಿ ಕಾಲಕಾಲಕ್ಕೆ ತಕ್ಕಂತೆ ಗೊಬ್ಬರ ನೀಡಿ ಮಾರ್ಗದರ್ಶಕರಾಗಿ ಎಂದರು.
ಈ ಸಂಧರ್ಭದಲ್ಲಿ ಸಹಯಾಕ ಕೃಷಿ ಅಧಿಕಾರಿ ಹೇಮಂತ್ ನಾಯ್ಕ್, ಹೇಮಂತ ಕುಮಾರ್, ಔಷಧಿ ಅಂಗಡಿ ವ್ಯಾಪಾರಿಗಳಾದ ಅಜಯ್, ಜಗದೀಶ್, ರಾಮಚಂದ್ರ, ಮಂಜುನಾಥ್, ಮಧು, ಚಂದ್ರಶೇಖರ್ ಇತರರು ಇದ್ದರು.