ಚಳ್ಳಕೆರೆ ನ್ಯೂಸ್ : ಗ್ರಾಪಂ ಕಚೇರಿಗೆ ಬೀಗ ಜಡಿದು ಕಚೇರಿ ಮುಂದೆ
ಅಡುಗೆ
ಮೊಳಕಾಲ್ಮೂರು ತಾಲೂಕಿನ ಬಿ. ಜಿ.ಕೆರೆ ಗ್ರಾ. ಪಂ ವ್ಯಾಪ್ತಿಯ ಗ್ರಾಮಗಳಲ್ಲಿ
ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರುತ್ತಿದ್ದು, ಹನಿ ನೀರಿಗೂ
ಪರೆದಾಡುವಂತ್ತಾಗಿದೆ.
ಕುಡಿಯಲು ನೀರು ಕೊಡದ ಸ್ಥಳೀಯ ಗ್ರಾ.
ಪಂ ಅಧ್ಯಕ್ಷರು ಮತ್ತು ಅಧಿಕಾರಿಗಳು ವಿರುದ್ಧ ಜನರು ಆಕ್ರೋಶ
ವ್ಯಕ್ತಪಡಿಸಿದ್ದು,
ಗ್ರಾಪಂ ಕಚೇರಿಗೆ ಬೀಗ ಜಡಿದು ಕಚೇರಿಯ ಮುಂದೆ
ಅಡುಗೆ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿ. ಜಿ. ಕೆರೆ ಗ್ರಾಮದ
ಬಿ. ಆರ್. ಅಂಬೇಡ್ಕರ್ ಬಡಾವಣೆ ಸೇರಿದಂತೆ ಗ್ರಾಪಂ ವ್ಯಾಪ್ತಿಯ
ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ.