ಹೋಬಳಿಯಾದ್ಯಂತ ಶಾಂತಿಯುತವಾಗಿ ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ.

ನಾಯಕನಹಟ್ಟಿ::ಏ.26. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಹೋಬಳಿಯಾದ್ಯಂತ ಶಾಂತಿಯುತವಾಗಿ ನಡೆಯಿತು.

ಶುಕ್ರವಾರ ಹೋಬಳಿಯ ಗ್ರಾಮ ಪಂಚಾಯತಿಗಳಾದ ನಲಗೇತನಹಟ್ಟಿ ಗೌಡಗೆರೆ,ಅಬ್ಬೇನಹಳ್ಳಿ ಮಲ್ಲೂರಹಳ್ಳಿ ಎನ್ ಮಹದೇವಪುರ. ತಿಮ್ಮಪ್ಪಯ್ಯನಹಳ್ಳಿ, ಎನ್ ದೇವರಹಳ್ಳಿ ನೇರಲಗುಂಟೆ ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಮತ್ತು ಪಟ್ಟಣ ಪಂಚಾಯತಿಯಲ್ಲಿ ಹಾಗೂ ಪ್ರತಿ ಬೂತ್ ಮಟ್ಟದಲ್ಲಿ ಶಾಂತಿಯುತವಾಗಿ ಚಿತ್ರದುರ್ಗ ಲೋಕಸಭಾ ಚುನಾವಣೆಯ ಮತದಾನ ನಡೆಯಿತು.

ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಉರಿಬಿಸಲು ಲೆಕ್ಕಿಸದೆ ಸಾರಧಿಯ ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು.

ಇನ್ನೂ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಟ್ಟಣದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನದ ಬಗ್ಗೆ ಮಾಹಿತಿಯನ್ನು ಪಡೆದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕ ರಾಜ್ಯಾಧ್ಯಕ್ಷ ಜಿ ಎಸ್ ಮಂಜುನಾಥ್, ಚಿತ್ರದುರ್ಗ, ಮುಖಂಡರಾದ ಪಾಟೀಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಪ್ರಭುಸ್ವಾಮಿ, ಸೈಯದ್ ಅನ್ವರ್, ಜೆ ಆರ್ ರವಿಕುಮಾರ್ ಅಬಕಾರಿ ತಿಪ್ಪೇಸ್ವಾಮಿ, ಮಂಜುಳಾ ಶ್ರೀಕಾಂತ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಮನ್ಸೂರ್, ಸಿದ್ದೀಕ್, ಮಹಮ್ಮದ್ ಯೂಸೇಪ್, ಕೌಸರ್ , ಮುನ್ನಣ್ಣ, ಶ್ರೀಕಾಂತ್, ಅಭಿ ,ನಾಗರಾಜ್ ಮೀಸೆ, ಸೇರಿದಂತೆ ಇದ್ದರು

About The Author

Namma Challakere Local News
error: Content is protected !!