ಚಿತ್ರದುರ್ಗ ಜಿಲ್ಲಾಧ್ಯಾಂತ ಶಾಂತಯುತ ಮತದಾನ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260 ಮತಗಟ್ಟೆಗಳಲ್ಲಿ ಮತದಾನ

ಚಳ್ಳಕೆರೆ : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಜಿಲ್ಲಾದ್ಯಾಂತ ಶಾಂತಿಯುತವಾಗಿ ಮತದಾನ ನಡೆಯಿತು.
ಶುಕ್ರವಾರ ಮುಂಜಾನೆಯಿAದ ಪ್ರಾರಂಭವಾದ ಮತದಾನ ಸಂಜೆವರೆಗೆ ಶಾಂತಯುತವಾಗಿ ಜರುಗಿತು ಅದರಂತೆ, ಚಳ್ಳಕೆರೆ ತಾಲೂಕಿನ ಸುಮಾರು 260 ಮತಗಟ್ಟೆಗಲ್ಲಿ ಒಟ್ಟಾರೆ 1180 ಸಿಬ್ಬಂದಿಗಳ ಮೂಲಕ ಮತದಾನ ಜರುಗಿತು.
ಇನ್ನೂ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡಲು ಯುವ ಮತದಾರರು ತಾ ಮುಂದು ನೀ ಮುಂದು ಎಂಬAತೆ ಸರಥಿ ಸಾಲಿನಿಲ್ಲಿ ನಿಂತು ಮತ ಚಲಾಯಿಸುವುದು ಎಲ್ಲೆಡೆ ಕಂಡು ಬಂದಿತು.
ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಉರಿಬಿಸಲು ಲೆಕ್ಕಿಸದೆ ಸಾರಧಿಯ ಸಾಲಿನಲ್ಲಿ ನಿಂತು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು.
ಅದರಂತೆ ಚಳ್ಳಕೆರೆ ತಾಲೂಕಿನ ವಿಶ್ವೇಶ್ವರಪುರ ಮತಗಟ್ಟೆಯಲ್ಲಿ ವಿವಿ ಪ್ಯಾಡ್ ಕೆಟ್ಟ ಪರಿಣಾಮ ಸುಮಾರು ಅರ್ಧಗಂಟೆ ಮತದಾನ ವಿಳಂಬವಾಗಿದ್ದು ತಕ್ಷಣ, ಹೊಸ ವಿವಿ ಪ್ಯಾಡ್ ಬದಲಾಯಿಸಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಇನ್ನೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸಂಜೆ 5 ಗಂಟೆಗೆ ಸರಿಯಾಗಿ ಶೇ.67.83ರಷ್ಟು ಮತದಾನ ಹಾಗಿತ್ತು ಇನ್ನೂ ಸಂಜೆ ವೇಳೆಗೆ ಬಿರುಸಿನ ಮತದಾನ ನಡೆಯಿತು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಮತಗಟ್ಟೆಗೆ ತೆರಳಲು ಸುಮಾರು 53 ಬಸ್ ಗಳು, 3 ಜೀಪ್ ಸಾರಿಗೆ ವ್ಯವಸ್ಥೆ ಮಾಡಲಾಗಿದೆ, ಇನ್ನೂ ಸುಮಾರು 60 ಮಾರ್ಗಗಳ ಮೂಲಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ, ಸುಮಾರು260 ಮತಗಟ್ಟೆಗಲ್ಲಿ ಒಟ್ಟಾರೆ 1180 ಸಿಬ್ಬಂದಿಗಳು ಚುನಾವಣೆಯಲ್ಲಿ ಪಾಲ್ಗೊಂಡಿದ್ದರು ಎಂದಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಸುಮಾರು 9 ಮತಗಟ್ಟೆಗಳನ್ನು ವಿಶೇಷ ಮತಗಟ್ಟೆಗಳನ್ನಾಗಿ ಮಾಡಿದೆ, 5ಸಖಿ ಮತಗಟ್ಟೆಗಳನ್ನು ನಗರದ ಉರ್ದುಶಾಲೆ, ಕಾಟಪನಹಟ್ಟಿ ಶಾಲೆ, ಹುಲಿಕುಂಟೆ ಶಾಲೆ, ಸಿದ್ದಾಪುರ ಹಾಗೂ ಪರುಶುರಾಂಪುರ ಶಾಲೆಯಲ್ಲಿ ಮಾಡಲಾಗಿದೆ, ಇನ್ನೂ ವಿಶೇಷ ಚೇತನ ಮತಗಟ್ಟೆಯನ್ನು ನಗರದ ವಿಶ್ವಭಾರತಿ ಶಾಲೆಯಲ್ಲಿ ಮಾಡಿದರೆ, ಯಂಗ್ ಮತಟ್ಟೆಯನ್ನು ನಗರದ ನವಚೇತನ ಶಾಲೆಯಲ್ಲಿ ಮಾಡಿದೆ,ಇನ್ನೂ ಹರಿಜನ ಗಿರಿಜನ ಬುಡಕಟ್ಟು ಸಂಪ್ರಾದಾಯಕ್ಕೆ ಸಂಬAಧಿಸಿದAತೆ ನನ್ನಿವಾಳದಲ್ಲಿ ಮಾಡಿದೆ ಇನ್ನೂ ತಾಲೂಕಿನ ಮಾದರಿಗೆ ದ್ಯೇಯ ಮತಗಟ್ಟೆ ಸರಕಾರಿ ಪದವಿ ಪೂರ್ವ ಪಿಯು ಕಾಲೇಜಿನಲ್ಲಿ ಮಾಡಲಾಗಿತ್ತು.
ಇದೇ ಸಂಧರ್ಭದಲ್ಲಿ ಸಹಾಯಕ ಚುನಾವಣೆ ಅಧಿಕಾರಿ ಬಿ.ಆನಂದ್, ತಹಶೀಲ್ದಾರ್ ರೇಹಾನ್ ಪಾಷ, ಇತರ ಸಿಬ್ಬಂದಿ ಹಾಜರಿದ್ದರು.

Namma Challakere Local News
error: Content is protected !!