ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ನಗರದಲ್ಲಿ 102, ವರ್ಷದ ಶತಾಯುಷಿ ಅಜ್ಜಿ ಮೆಹಬೂಬಿ ತನ್ನ ಇಳಿ ವಯಸ್ಸಿನಲ್ಲಿಯೂ ಕುಂದದೆ ಮನೆಯಿಂದ ಮತ ಕೇಂದ್ರದವರಿಗೂ ನಡೆದುಕೊಂಡು ಬಂದು ಮತ ಚಲಾಯಿಸಿದ್ದಾರೆ.
ಮತದಾನ ಮಾಡಿದ ಶತಾಯುಷಿ 102 ವರ್ಷದ ವೃದ್ದೆ ಮೆಹಬೂಬಿ ರವರು ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಯುವಕ – ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮತ ಚಲಾಯಿಸುತ್ತಿದ್ದಾರೆ. ವೃದ್ದರು ನಡೆಯಲು ಕೂಡದೇ ಇದ್ದರೂ ವೀಲ್‌ಚೇರ್‌ನಲ್ಲಿ ಬಂದು ಮತ ಚಲಾಯಿಸಿದ್ದಾರೆ.
ಚಳ್ಳಕೆರೆ ನಗರದ ಗಾಂಧಿನಗರದಲ್ಲಿ ಮಗಳು ಹಾಗೂ ಅಳಿಯ ಇವರ ಜತೆಯಲ್ಲಿ ವಾಸ ಮಾಡುತ್ತಿರುವ ಈ ಶತಾಯುಷಿ ಮೆಹಬೂಬಿ ತನ್ನು ಅಳಿಯ ಮಗಳು ಜತೆ ನಗರದ ಕೃಷಿ ಇಲಾಖೆ ಮತ ಗಟ್ಟೆ ಕೆಂದ್ರಕ್ಕೆ ನಡೆದುಕೊಂಡು ಬಂದ ತನ್ನ ಹಕ್ಕನ ಚಲಾಯಿಸಿದರು.
ಮೆಹಬೂಬಿಗೆ ಈಗಾ 102 ವರ್ಷಗಳ ಕಳೆದಿವೆ. ಕಣ್ಸು ಚನ್ನಾಗಿಯೆ ಕಾಣುತ್ತವೆ ಕಿವಿಗಳು ಸಹ ಚನ್ನಾಗಿ ಕೇಳುತ್ತಿವೆ. ಈ ವೇಳೆ ಶತಾಯುಷಿ ವೃದ್ದೆಯ ಜತೆ ಅಳಿಯರಾದ ಸೈಯದ್ ಸರ್ವರ್, ಮಗಳು ಬೇಗಂ ಉನ್ನಿಸಾ, ಮೊಮ್ಮಗ ಸೈಹಾದ್ ಅಹಮದ್ ಮೊಮ್ಮಗಳು ನಜ್ಮ ಕೌಸರ್ ಸಹ ಮತದಾನ ಮಾಡಿದರು