ಮದ್ಯ ನಿಷೇಧ ಮಾಡದಿದ್ದರೆ ಚುನಾವಣೆಯ ಬಹಿಷ್ಕಾರ ಗ್ರಾಮಸ್ಥರ ಎಚ್ಚರಿಕೆ.
ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು, ಪರಶುರಾಂಪುರ ಹೋಬಳಿ, ಬೆಳಗೆರೆ ಪಂಚಾಯಿತಿಯ, ಕಲಮರಳ್ಳಿ ಗ್ರಾಮದ ಗ್ರಾಮಸ್ಥರು ಮುಜುರೆ ಗ್ರಾಮ ಕಲಮರಳ್ಳಿಯ…. ಸಿದ್ದೇಶಪುರ ಬಡಾವಣೆ ಮತ್ತು ಜಾಲಿ ಗೊಲ್ಲರಹಟ್ಟಿ, ಮತ್ತು ಖ್ಯಾತನ ಮಳೆ ಈ ಭಾಗದಲ್ಲಿ ಇಡೀ ಬೆಳಗೆರೆ ಪಂಚಾಯಿತಿಯ ಎಲ್ಲಾ ಗ್ರಾಮಗಳ ಕಿರಾಣಿ ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುವುದನ್ನು ನಿಷೇಧಮಾಡಬೇಕು ಎಂದು ಮಹಿಳೆಯರ ಒತ್ತಾಯವಾಗಿದೆ.
ಕಲಮರಹಳ್ಳಿ ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳಿಗಿಂತ ಹೆಚ್ಚಾಗಿ ಮಧ್ಯ ಮತ್ತು ಸರಾಯಿ ಹೆಚ್ಚಾಗಿ ಮಾರಾಟ ವಾಗುತ್ತಿದೆ…. ಇದರಿಂದ ಇಲ್ಲಿನ ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹಾಗೂ ಯುವ ಜನತೆಗೆ ಅದರ ಪರಿಣಾಮ ಹೆಚ್ಚಾಗಿ ಬೀರುತ್ತಿದೆ…
ಕೆಲ ಯುವಕರು, ಕೂಲಿ ಕಾರ್ಮಿಕರು ಮಧ್ಯ ವ್ಯಸನಕ್ಕೆ ಬಿದ್ದು ಹಲವು ಗಂಭೀರವಾದ ಕಿಡ್ನಿ ಸಮಸ್ಯೆ, ಮಾನಸಿಕ ಸ್ಥಿತಿ ಸರಿಯಾಗಿಲ್ಲದಿರುವುದು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
ಇದರಿಂದ ಇಲ್ಲಿನ ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹಾಗೂ ಯುವ ಜನತೆಗೆ ಅದರ ಪರಿಣಾಮ ಹೆಚ್ಚಾಗಿ ಬೀರುತ್ತಿದೆ…
ಈ ಹಿನ್ನೆಲೆಯಲ್ಲಿ ಮಧ್ಯ ನಿಷೇಧದ ಬಗ್ಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದರು ಗ್ರಾಮದ ಸ್ಥಳೀಯ ಮುಖಂಡರ ಇಚ್ಛಾಶಕ್ತಿಯ ಕೊರತೆ ಮತ್ತು ವೋಟ್ ಬ್ಯಾಂಕ್ ನ ಚುನಾವಣೆಯ ರಾಜಕಾರಣದ ಹಿತ ದೃಷ್ಟಿಯಿಂದ ಮಧ್ಯ ನಿಷೇಧ ಆಂದೋಲನಕ್ಕೆ ಯಾವುದೇ ಸಹಕಾರ ಸಿಗುತ್ತಿಲ್ಲ
ಹೆಚ್ಚಿನ ಸಂಖ್ಯೆಯಲ್ಲಿರುವ ಕುಡುಕರ ಮತ್ತು ಮಧ್ಯಪ್ರಿಯರ ಮತಗಳು ತಪ್ಪಿ ಹೋಗುವ ಭಯದಿಂದ ಮಧ್ಯ ನಿಷೇಧದಂತಹ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿಲ್ಲ.
ಅಲ್ಲದೆ ಪ್ರತಿ ಕಿರಾಣಿ ಅಂಗಡಿಗಳಿಗೆ ಹೇಗೆ ಮಧ್ಯ ಸರಾಯಿ ತಲುಪುತ್ತದೆ ಎನ್ನುವುದರ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ
ಇದರಿಂದ ಬೇಸತ್ತ ಇಲ್ಲಿನ ಮಹಿಳೆಯರು ಮತ್ತು ಪ್ರಜ್ಞಾವಂತ ಜನ ಸುದ್ದಿ ವಾಹಿನಿಗಳೊಂದಿಗೆ ನೇರವಾಗಿ ಮಾತನಾಡಿ ಗ್ರಾಮದಲ್ಲಿ ಸರಾಯಿ ಮಧ್ಯ ನಿಷೇಧ ಆಗದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ವೇಳೆ ಲಕ್ಷ್ಮಕ್ಕ, ಲಕ್ಕಜ್ಜಿ ರತ್ನಮ್ಮ, ಮಂಜಮ್ಮ, ಶಾರದಮ್ಮ, ಮಲ್ಲಜ್ಜಿ, ಕಾವ್ಯ, ಸೌಮ್ಯ, ರಮ್ಯ ಗೌರಜ್ಜಿ, ಸೇರಿದಂತೆ ಅನೇಕರು ಭಾಗಿ ಯಾಗಿದ್ದರು