ಚಳ್ಳಕೆರೆ ನ್ಯೂಸ್ :

2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರು ಸಹ ಕೆಲವು ಅಕ್ರಮ ಮಧ್ಯ ಸಾಗಟದಲ್ಲಿ ತೊಡಗಿದವರನ್ನು ಎಡೆಮುರಿ ಕಟ್ಟಿ ಪ್ರಕರಣ ದಾಖಲಿಸಿದ ಅಬಕಾರಿ ಇನ್ಸ್ಪೆಕ್ಟರ್ ನಾಗರಾಜ್.

ಹೌದು ಚಳ್ಳಕೆರೆ ನಗರದಲ್ಲಿ ಗಸ್ತು ಕಾರ್ಯ ನಿರ್ವಹಿಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಚಳ್ಳಕೆರೆ- ಪಾವಗಡ ರಸ್ತೆ , ನೀಲಕಂಠೇಶ್ವರ ದೇವಸ್ಥಾನದ ಹತ್ತಿರ ರಾತ್ರಿ 8.00 ಗಂಟೆ ಸಮಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ದ್ವಿ ಚಕ್ರ ವಾಹನದಲ್ಲಿ ಹೆಚ್.ನಾಗೇಶ್ ಭೋಗನಹಳ್ಳಿಗ್ರಾಮದವನು ಒಂದು ಚೀಲದಲ್ಲಿ 90 ml ನ Haywards whisky ಯ 88 ಟೆಟ್ರಾ ಪ್ಯಾಕ್ ಒಟ್ಟು 7.920ಲೀಟರ್ ಅಕ್ರಮ ಮದ್ಯವನ್ನು ಹೊಂದಿ ಸಾಗಿಸುತ್ತಿದ್ದು ಸದರಿ ಮದ್ಯ ಮತ್ತು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿ ವಶಪಡಿಸಿಕೊಳ್ಳಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ
ಅಬಕಾರಿ ಉಪ ಆಯುಕ್ತರು, ಚಿತ್ರದುರ್ಗ, ನಿರ್ದೇಶನ ಹಾಗೂ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ ಮತ್ತು ಅಬಕಾರಿ ನಿರೀಕ್ಷಕರಾದ ಸಿ.ನಾಗರಾಜು ಚಳ್ಳಕೆರೆ ವಲಯ ರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ರೇಖಾ ಎಸ್.ಹೆಚ್ ಮತ್ತು ಡಿ.ಟಿ.ತಿಪ್ಪಯ್ಯ ಚಳ್ಳಕೆರೆ ವಲಯ ಇವರು ಮತ್ತು ಚಳ್ಳಕೆರೆ ವಲಯ ಸಿಬ್ಬಂದಿಗಳಾದ ಅಬಕಾರಿ ಹಿರಿಯ ಕಾನ್ಸ್ಟೇಬಲ್ ಗಳಾದ ಸೋಮಶೇಖರ ಮತ್ತು ನಾಗರಾಜು ,ಮಂಜುಳ ಇವರೊಂದಿಗೆ ವಾಹನ ತಡೆದು ತನಿಖೆ ಕೈಗೊಂಡು,

ಒಟ್ಟು ಜಪ್ತುಪಡಿಸಿದ ಮದ್ಯ 7.920ಲೀ
ಒಟ್ಟು ಮದ್ಯದ ಮೌಲ್ಯ 3,520 ರೂ
ದ್ವಿಚಕ್ರ ವಾಹನದ ಮೌಲ್ಯ 50,000ರೂ
ಒಟ್ಟಾರೆ 53,520 ರೂ ಆಗಿರುತ್ತದೆ ಎನ್ನಲಾಗಿದೆ.

About The Author

Namma Challakere Local News
error: Content is protected !!