ಚಳ್ಳಕೆರೆ ನ್ಯೂಸ್ :
2024 ರ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಮತಗಟ್ಟೆ
ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಆನಂದ್
ಹೇಳಿದರು.

ಅವರು ‌ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಳ್ಳಕೆರೆ ವಿಧಾನಸಭಾ
ಕ್ಷೇತ್ರವ್ಯಾಪ್ತಿಯ ಲೋಕಸಭಾ ಚುನಾವಣೆ ಕರ್ತವ್ಯಕ್ಕೆ
ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳಿಗೆ ಆಯೋಜಿಸಿದ್ದ
ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಲೋಕಸಭಾ
ಚುನಾವಣಾ ಕರ್ತವ್ಯಕ್ಕೆ ವಿವಿಧ ತಾಲೂಕುಗಳಿಂದ 1180 ಮತಗಟ್ಟೆ
ಅಧಿಕಾರಿಗಳು ನಿಯೋಜನೆಗೊಂಡವರು ತಮಗೆ ವಹಿಸಿದ
ಕೆಲಸಗಳನ್ನು ಕ್ರಮಬದ್ಧವಾಗಿ ನಿರ್ವಹಿಸಬೇಕು.

ನಿಮಗೆ‌ ನೀಡಿದ ತರಬೇತಿಯ ಮೂಲಕ ಚುನಾವಣೆಯಲ್ಲಿ ಯಾವುದೇ
ಹಂತದಲ್ಲೂ ಲೋಪದೋಷಗಳಿಗೆ ಅವಕಾಶ ನೀಡಬಾರದು ಎಂದು
ತಿಳಿಸಿದರು.

ಇನ್ನೂ ತಹಶೀಲ್ದಾರ್ ರೇಹಾನ್ ಪಾಷಾ ಮಾತನಾಡಿ, ಚುನಾವಣೆಗೆಂದು ಗ್ರಾಮಗಳಿಗೆ ತೆರಳಿದ ಸಂಧರ್ಭದಲ್ಲಿ ಯಾವುದೇ ಕಾರಣಕ್ಕೂ ಮುಖಂಡರ ಮನೆ, ಕಾರ್ಯಕರ್ತರ ಮನೆಗೆ ತೆರಳುವಂತೆ ಇಲ್ಲ, ನಿಮಗೆ ಮತಗಟ್ಟೆ
ಕೇಂದ್ರಗಳಿಗೆ ಹೋಗುವ ಮುನ್ನ ನಿಮಗೆ ನೀಡಿರುವ ಪರಿಕರಗಳು
ಸರಿಯಾಗಿವೆ ಎಂದು ಪರಿಶೀಲನೆ ಮಾಡಿಕೊಳ್ಳಬೇಕು, ಮತದಾನ
ಪ್ರಾರಂಭ ಮುನ್ನ ಅಣಕು ಮತದಾನದ ನಂತರು ಅದನ್ನು ಎಣಿಕೆ
ಮಾಡಿ ತೋರಿಸಿ ನಂತರ ಮತದಾನ ಪ್ರಾರಂಭ ಮಾಡಬೇಕು.
ಚುನಾವಣೆ ಆಯೋಗದ
ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮೂಲಕ
ಚುನಾವಣಾ ಕರ್ತವ್ಯಕ್ಕೆ ಲೋಪ ಎಸಗದಂತೆ ಕರ್ತವ್ಯ
ನಿರ್ವಹಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸೆಟ್ಟರ್ ಅಧಿಕಾರಿಗಳು, ತರಬೇತಿ ಸಂಪನ್ಮೂಲ
ಅಧಿಕಾರಿಗಳು,ಉಪಸ್ಥಿತಿ ಇದ್ದರು

About The Author

Namma Challakere Local News
error: Content is protected !!