ಚಳ್ಳಕೆರೆ ನ್ಯೂಸ್ :
ಕೆರೆ ಮಣ್ಣು ವಿಚಾರ ಕುರಿತಂತೆ ರೈತರ ಮಧ್ಯೆ ವಾಗ್ವಾದ
ತಾಲೂಕಿನ ದೇವಸಮುದ್ರ ಕೆರೆಯ ಮಣ್ಣು ಸುತ್ತಲಿನ
ಜಮೀನುಗಳಿಗೆ ಬಳಕೆ ಮಾಡುವ ಕುರೊತು ದೇವಸಮುದ್ರ ಗ್ರಾಪಂ
ವ್ಯಾಪ್ತಿಯ ಗ್ರಾಮಗಳ ರೈತರ ಮಧ್ಯ ನಡೆದ ವಾಗ್ವಾದವು ಪೊಲೀಸರ
ಮುನ್ನೆಚ್ಚರಿಕೆಯಿಂದ ಶಾಂತ ರೀತಿಯಲ್ಲಿ ಕೊನೆಗೊಂಡಿತು.
ತಾಲೂಕಿನ ದೇವಸಮುದ್ರ ಕೆರೆಯಂಗಳದಲ್ಲಿ ಬೆಳಿಗ್ಗೆ ಬೀಡುಬಿಟ್ಟಿದ್ದ
ಪೊಲೀಸ್ ಅಧಿಕಾರಿಗಳು ಈ ಗ್ರಾಪಂ ವ್ಯಾಪ್ತಿಯ ನಾನಾ
ಗ್ರಾಮಗಳ ರೈತರ ಮಧ್ಯೆ ಕೆರೆ ಮಣ್ಣಿಗೆ ಸಂಬಂಧಿಸಿದಂತೆ ಅಗತ್ಯ
ಖಡಕ್ ಎಚ್ಚರಿಕೆ ನೀಡಿ,
ಗಲಾಟೆ ವಿಕೋಪಕ್ಕೆ ತೆರಳುತ್ತಿದ್ದ ಪರಿಸ್ಥಿತಿಯನ್ನು
ಹತೋಟಿಗೆ ತಂದರು.