ಚಳ್ಳಕೆರೆ ನ್ಯೂಸ್ :
ಮೊದಲ ಬೇಸಾಯಕ್ಕೆ ಮುಂದಾದ ರೈತರು
ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗ್ರಾಮದಲ್ಲಿ, ಎತ್ತಿನ ಬಂಡಿಗಳನ್ನ
ಸಿಂಗರಿಸಿ ಮೆರವಣಿಗೆ ಮಾಡಿ,
ಜಮೀನುಗಳತ್ತ ಕರೆದೊಯ್ಯುವ
ಮೂಲಕ, ವರ್ಷದ ಮೊದಲ ಬೇಸಾಯಕ್ಕೆ ಚಾಲನೆ ನೀಡಲಾಯಿತು.
ಗ್ರಾಮಸ್ಥರು ಸೇರಿ ವರ್ಷದ ಮೊದಲ ಬೇಸಾಯಕ್ಕೆ ಮುನ್ನುಡಿ
ಬರೆಯುವುದು ವಾಡಿಕೆ, ಅದರಂತೆ ಊರು ಬಾಗಿಲ ಬಳಿಯ
ಕರಿಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ
ಊರ ಕೃಷಿಗೆ ಎತ್ತುಗಳು, ಕರಿಕಲ್ಲು ಕಟ್ಟೆ ಹಾಗೂ ಎತ್ತುಗಳ
ಪಾದಕ್ಕೆ ಪಂಚಾಮೃತ ಅಭಿಷೇಕ ಮಾಡಿ, ಮಳೆ ಬೆಳೆಯಾಗುವಂತೆ
ಪ್ರಾರ್ಥಿಸಲಾಯಿತು.