ಮಾದಿಗ ದಂಡೋರ ರಾಷ್ಟ್ರೀಯ
ಅಧ್ಯಕ್ಷ ಮಂದ ಕೃಷ್ಣ ಮಾದಿಗ
ಚಳ್ಳಕೆರೆ ನ್ಯೂಸ್ :
ಮೀಸಲಾತಿ ವರ್ಗೀಕರಣ ಮೋದಿಯಿಂದ ಮಾತ್ರ ಸಾಧ್ಯ
ಮಾದಿಗ ಮೀಸಲಾತಿ ಜಾರಿಗೆಯಾಗಬೇಕಾದರೆ, ಕೇಂದ್ರದ
ಮೋದಿಯವರಿಂದ ಮಾತ್ರ ಸಾಧ್ಯ, ಆದ್ದರಿಂದ ಮಾದಿಗರು
ಬಿಜೆಪಿ ಬೆಂಬಲಿಸಬೇಕೆಂದು ಮಾದಿಗ ದಂಡೋರ ರಾಷ್ಟ್ರೀಯ
ಅಧ್ಯಕ್ಷ ಮಂದ ಕೃಷ್ಣ ಮಾದಿಗ ಹೇಳಿದರು.
ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. 40 ವರ್ಷಗಳಿಂದ
ಮೀಸಲಾತಿ ವರ್ಗೀಕರಣಕ್ಕೆ ಹೋರಾಟ ನಡೆಯುತ್ತಿದೆ.
ಖರ್ಗೆ ಸೇರಿದಂತೆ ಕಾಂಗ್ರೆಸ್ ನಲ್ಲಿ ಬಹಳಷ್ಟು ಮಂದಿ, ಎಸ್ಸಿ ಮೀಸಲಾತಿ
ವರ್ಗೀಕರಣಕ್ಕೆ ಅಡ್ಡಿಯಾಗುತ್ತಾರೆ.
ಆದ್ದರಿಂದ ಮೀಸಲಾತಿ
ವರ್ಗೀಕರಣ ಮಾಡಲು, ಮೋದಿ ಸರಿ ಎಂದರು.