ಚಳ್ಳಕೆರೆ ನ್ಯೂಸ್ : 2024 ರ
ಲೋಕಸಭಾ ಚುನಾವಣೆಗೆ ಅಂಗವಾಗಿ ಮಾದರಿ ನೀತಿ ಸಂಹಿತೆ ಜಾರಿಯಾದ ದಿನದಿಂದ
ಇಲ್ಲಿಯವರೆಗೆ 59,46,766 ರೂಗಳ ಅಕ್ರಮ ಮದ್ಯವಶಕ್ಕೆ
ಪಡೆದು ಬರೋಬ್ಬರಿ 91 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ನಾಗರಾಜು ಹೇಳಿದರು.
ಅವರು
ನಗರದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇನ್ನೂ
ಮಾ.16 ರಂದು ಲೋಕಸಭಾ ಚುನಾವಣೆಯ ಮಾದರಿ ನೀತಿ
ಸಂಹಿತೆಯಾದ ಹಿನ್ನಲೆಯಲ್ಲಿ ತಾಲ್ಲೂಕಿನಲ್ಲಿ ಅಬಕಾರಿ ಅಧಿಕಾರಿಗಳು
ಅಕ್ರಮ ಅಬಕಾರಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ
ವಾಹನಗಳನ್ನು ತಪಾಸಣೆ ನಡೆಸಿವಾಗ 59,46,766 ರೂಗಳ ಬೆಲೆ
ಬಾಳುವ 14,790ಲೀಟರ್ ಅಕ್ರಮ ಮದ್ಯ, 6 ದ್ವಿಚಕ್ರವಾಹಗಳು ವಶಕ್ಕೆ
ಪಡೆದು 91 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗ ಜಿಲ್ಲೆಗೆ ಹಾಗು ಹೊಸಪೇಟೆ ಅಬಕಾರಿ ವಿಭಾಗದಲ್ಲಿಯೇ
ಚಳ್ಳಕೆರೆ ತಾಲ್ಲೂಕಿನಲ್ಲಿ ಹೆಚ್ಚಿನದಾಗಿ ಮದ್ಯ ವಶಕ್ಕೆ ಪಡೆಯಲಾಗಿದೆ.
ತಾಲ್ಲೂಕಿನಲ್ಲಿ91 ಅಬಕಾರಿ ಪ್ರಕರಣಗಳಲ್ಲಿ 5ಸನ್ನದ್ದು ಪ್ರಕರಣಗಳು,
7ಘೋರ ಪ್ರಕರಗಳನ್ನು ದಾಖಲು ಮಾಡಲಾಗಿದೆ.
ಘೋರ
ಪ್ರಕರಣಗಳಿಗೆ 5 ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು.
ಈ ವೇಳೆ ಸುದ್ದಿಗೋಷ್ಠಿಯಲ್ಲಿ ಅಬಕಾರಿ ಪಿಎಸ್ ಐಗಳಾದ ತಿಪ್ಪಯ್ಯ, ಪಿಎಸ್ಐ
ರೇಖಾ, ಅಬಕಾರಿ ಸಿಬ್ಬಂದಿಗಳಾದ ಮಂಜುಳ, ನಾಗರಾಜ್ ಸೇರಿದಂತೆ
ಇತರರು ಇದ್ದರು.