ಚಳ್ಳಕೆರೆ : ಬಯಲು ಸೀಮೆಯ ರೈತರಿಗೆ ಬಂತು ಫಸಲ್
ಬಿಮಾ ವಿಮಾ ಯೋಜನೆಯ ಮಧ್ಯಂತರ ಪರಿಹಾರ: ಸಂಕಟದಲ್ಲಿರುವ
ಅನ್ನದಾತರ ಖಾತೆ ಜಮೆಯಾತ್ತು ಬೆಳೆವಿಮೆ.
2023-24ನೇ ಸಾಲಿನಲ್ಲಿ ಜಿಲ್ಲೆಯ 2,59,486 ಎಕರೆ ಕೃಷಿ ಭೂಮಿಯ
ಪೈಕಿ, 1,05,000 ಎಕೆರೆ ಪ್ರದೇಶಕ್ಕೆ 80,633 ರೈತರು ಬೆಳೆ ವಿಮೆ
ನೊಂದಾವಣಿ ಮಾಡಿಸಿದ್ದಾರೆ.
ಮಳೆಯಿಲ್ಲದೆ ಬರದಿಂದ ಕಂಗೆಟ್ಟಿದ್ದ
ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ
ಎಂದು ಘೋಷಿಸಿತ್ತು. ಸರ್ಕಾರದಿಂದ ಬರ ಪರಿಹಾರ ಶೀಘ್ರ ಬಿಡಿಗಡೆ
ಮಾಡುವಂತೆ ರೈತ ಮುಖಂಡರ ಹೋರಾಟ, ಅಧಿಕಾರಿಗಳು ಬೆಳೆ ನಷ್ಟದ
ಬಗ್ಗೆ ವರದಿ ನೀಡಿದರೂ ಬೆಳೆ ವಿಮೆ ಬಿಡುಗಡೆ ಮಾಡಲು ಬೆಳೆ
ವಿಮೆಕಂಪನಿಗಳ ವಿಳಂಭ ದೋರಣೆಯನ್ನು ಖಂಡಿಸಿ ರೈತ
ಸಂಘಟನೆಗಳ ಹೋರಾಟದ ಫಲವಾಗಿ ಗುರುವಾರ ರೈತರ ಖಾತೆಗೆ ಬೆಳೆ
ವಿಮೆ ಪರಿಹಾರದ ಮೊತ್ತ ರೈತರ ಖಾತೆಗೆ ಜಮೆಯಾಗಿದ್ದು ಯುಗಾಧಿ
ಮುನ್ನವೇ ಬೇವು ಬೆಲ್ಲ ಸವಿದಷ್ಟು ಖುಷಿಯಾಗಿದೆ..
ನಿರೀಕ್ಷೆಯ
ನಡುವೆಯೇ, ವಿಮೆ ತುಂಬಿತ ರೈತರಿಗೆ ಮಧ್ಯಂತರ ಪರಿಹಾರ ಹಣ
ಬಿಡುಗಡೆಯಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಳ್ಳಕೆರೆ ತಾಲೂಕಿನ ಸೋಮಗುದ್ದ ಗ್ರಾಮಪಂಚಾಯಿತಿ ಮಾತ್ರ ಫಸಲ್
ಭೀಮ ಯೋಜನೆಯ ಬೆಳೆ ವಿಮೆಯಿಂದ ವಂಚಿತವಾಗಿದ್ದು ಬೆಳೆ
ಕಾಟಾವ್ ಪ್ರಯೋಗದಲ್ಲಿ ಬೆಳೆವಿಮೆ ನಿಗಧಿ ಪಡಿಸಿದ ಕ್ಕಿಂತ ಹೆಚ್ಚಿನ ತೂಕ
ಬಂದಿರುವುದರಿಂದ ಬೆಳೆ ವಿಮೆಯಿಂದ ಈ ಪಂಚಾಯಿತಿ ರೈತರಲ್ಲಿ
ಯುಗಾಧಿ ಹಬ್ಬಕ್ಕೆ ಬೇವು ಮಾತ್ರ ಸಿಕ್ಕಿದ್ದು ಬೆಲ್ಲ ಇಲ್ಲದೆ ಕಹಿಯಾಗಿದೆ.