ಚಳ್ಳಕೆರೆ ನ್ಯೂಸ್ : ತಾಲೂಕಿನಲ್ಲಿ ಬರಗಾಲ ಇರುವ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಸನ್ನದರಾಗಬೇಕು ಎಂದು ನೋಡಲ್ ಅಧಿಕಾರಿ ರಾಮಾಂಜನೇಯ ಸೂಚನೆ ಮೇರೆಗೆ ಇಂದು ತಾಲೂಕಿನ
ಸೋಮಗುದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮದುರೆ ಮತ್ತು ಚಿಕ್ಕಮಧುರೆ ಗ್ರಾಮ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡೆಸಿದರು.
ಚಿಕ್ಕಮಧುರೆ ಗ್ರಾಮದ ವಾಸಿ ಮಲ್ಲಿಕಾರ್ಜುನ ಎಂಬುವವರು ತನ್ನ ಕೊಳವೆ ಬಾವಿಯನ್ನು ಕುಡಿಯುವ ನೀರಿಗೆ ಉಪಯೋಗಿಸಿಕೊಳ್ಳಲು ಬಿಟ್ಟು ಕೊಟ್ಟಿರುತ್ತಾರೆ ಹಾಗೂ ಹಿರೇಮದುರೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಉಪಯೋಗಿಸಿಕೊಳ್ಳಲು ಎಸ್.ಎಂ.ಲಿಂಗರಾಜು ಇವರು ಸಹ ಕೊಳವೆ ಬಾವಿ ನೀರು ಬಿಟ್ಟು ಕೊಟ್ಟಿರುತ್ತಾರೆ ಎಂದು ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು ಲಿಂಗೇಗೌಡ ಹೇಳಿದರು.
ಈ ಸಂದರ್ಭದಲ್ಲಿ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು ಲಿಂಗೇಗೌಡ, ಗ್ರಾಮ ಆಡಳಿತ ಅಧಿಕಾರಿ ಕೇಶವಾಚಾರ್ , ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌತಮಿ ಹಾಗೂ ಗ್ರಾಮಸ್ಥರು ಹಾಜರಿರುತ್ತಾರೆ.