ಚಳ್ಳಕೆರೆ: ಬರಗಾಲ ಪೀಡಿತ ಪ್ರದೇಶಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಸೌಲಭ್ಯ ದೊರಕಿಸುವಂತೆ ಈಗಾಗಲೇ ರಾಜ್ಯಸರ್ಕಾರ ಆದೇಶಿಸಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು ನಾಲ್ಕು ಗೊಶಾಲೆಗಳಲ್ಲಿ ಉದ್ಘಾಟನೆಗೊಂಡು ಗೋವುಗಳಿಗೆ ಮೇವು ನೀರು ಕೊಡುತ್ತಾರೆ ಆದರೆ ನೆರಳಿನ ವ್ಯವಸ್ಥೆ ಮಾತ್ರ ಇಲ್ಲವಾಗಿದೆ.
ಆದರೆ ಈ ಬಾರೀಯ ಬಿಸಿಲು ಹೆಚ್ಚಾಗಿದೆ ಸರಿಸುಮಾರು 38 ಡಿಗ್ರಿ ಸೆಲ್ಸಿಯಸ್ ಗೆ ತಲುಪುತ್ತಿದೆ. ಇತ್ತ ಮೇವಿಲ್ಲದ್ದರೂ ಜೀವಿಸಬಹುದು ಆದರ ಈ ಬಿಸಿಲಿನ ಬೇಗೆಯಿಂದ ತಪ್ಪಿಸಿ ಎಂದು ಮೂಖ ಪ್ರಾಣಿಗಳ ರೋಧನೆ ಜಿಲ್ಲಾಡಳಿತಕ್ಕೆ ತಿಳಿಯದಾಗಿದೆ.
ಚಳ್ಳಕೆರೆ ತಾಲೂಕಿನಲ್ಲಿ ಪರುಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಚೋಳೂರು ಕಾವಲ್ಬಳಿ ತಾತ್ಕಾಲಿಕ ಗೋಶಾಲೆನಿರ್ಮಿಸಿದರು ಸರಿಯಾದ ನೆರಳಿನ ವ್ಯವಸ್ಥೆ ಇಲ್ಲವಾಗಿದೆ.
ಇನ್ನೂ ಕಸಬಾದಲ್ಲಿ ಜಗಲೂರುಜ್ಜನ ದೇವಸ್ಥಾನ ಸಮೀಪ ನಿರ್ಮಿಸಿದ ತಾತ್ಕಲಿಕ ಗೋಶಾಲೆ ಕೂಡ ನೆರವಿನಿಂದ ದೂರ ಉಳಿದಿದೆ. ಇತ್ತ ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿ ಸಮೀಪದಲ್ಲಿ ಶಾಶ್ವತವಾಗಿ ನಿರ್ಮಿಸಿದ ಗೋಶಾಲೆಯಲ್ಲಿ ಕೇವಲ 8 ಶೆಡ್ ಮಾತ್ರ, ಅದರಲ್ಲಿ ಸರಿಸುಮಾರು 300 ಗೋವುಗಳು ಬಿಟ್ಟರೆ, ಉಳಿದ ಗೋವುಗಳು ಉರಿ ಬಿಸಿಲಿನ ತಾಪದಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಈಗೇ ಕುಡಿಯುವ ನೀರು, ಮೇವಿನ ವ್ಯವಸ್ಥೆ ಮಾಡಿದ ಜಿಲ್ಲಾಡಳಿತ ನೆರಳಿನ ವ್ಯವಸ್ಥೆ ಕೂಡ ಮಾಡಿ ಮೂಖ ಪ್ರಾಣಿಗಳ ರಕ್ಷಣೆಗೆ ಮುಂದಾಗುವುದಾ ಕಾದುನೋಡಬೇಕಿದೆ.
ಇನ್ಮೂ ಜಿಲ್ಲಾಡಳಿತಕ್ಕೆ ಗೋ ಪಾಲಕರು ಮನವಿ ಮಾಡಿದ್ದಾರೆ, ಅತೀ ಶೀಘ್ರದಲ್ಲೇ ಬುಡಕಟ್ಟು ಸಮುದಾಯದ ಗೋವುಗಳ ರಕ್ಷಣೆಗೆ ಮುಂದಾಗಬೇಕು, ನೆರಳಿನ ವ್ಯವಸ್ಥೆ ಕಲ್ಪಿಸಿ, ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಹೇಳಿಕೆ :
ತಾಲೂಕಿನಲ್ಲಿ ಈಗಾಗಲೇ ಸಾವಿರಾರು ಗೋವುಗಳಿಗೆ ಕುಡಿಯುವ ನೀರು, ಮೇವು ಹಾಗೂ ನೆರಳಿನ ವ್ಯವಸ್ಥೆ ಮಾಡಿಲಾಗಿದೆ. ಗೋವುಗಳ ಸಂಖ್ಯೆಗೆ ತಕ್ಕಂತೆ ಈಗಾಗಲೇ ತಾಲೂಕು ಆಡಳಿತ ವ್ಯವಸ್ಥೆ ಮಾಡಿದೆ, ಮುಂದೆಯೂ ಕೂಡ ಗೋಶಾಲೆಗಳೆಗೆ ಹೆಚ್ಚಿನ ಗೋವುಗಳು ಬಂದರೆ ಅವುಗಳಿಗೆ ಕೂಡ ನೆರಳಿನ ವ್ಯವಸ್ಥೆ, ಮೇವಿನ ವ್ಯವಸ್ಥೆ ಮಾಡಲಾಗುವುದು.
—ರೇಹಾನ್ ಪಾಷ, ತಹಶೀಲ್ದಾರ್ ಚಳ್ಳಕೆರೆ.