ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯ ಆರಾಧ್ಯದೈವ ಮಧ್ಯ ಕರ್ನಾಟಕದ ಬುಡಕಟ್ಟು
ಸಮುದಾಯಗಳ ಸಾದ್ವಿ , ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯ
ಶ್ರೀಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.
ಇನ್ನೂ ಮುಂಜಾನೆಯಿಂದ ಭಕ್ತಾದಿಗಳು ತಮ್ಮ ಇಷ್ಟ ದೇವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಗೆ ಹರಕೆ ತೀರಿಸುತ್ತಾ ಸರಥಿ ಸಾಲಿನಲ್ಲಿ ದೇವರ ಅರ್ಚನೆ ಮಾಡಿಸಿದರು.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ
ಬಾವುಟದ ಹರಾಜು ಪ್ರಕ್ರಿಯೆಯಲ್ಲಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ
ಸಚಿವ ಡಿ.ಸುಧಾಕರ್ 61 ಲಕ್ಷ ರೂ.ಗಳಿಗೆ ಮುಕ್ತಿ ಭಾವುಟವನ್ನು
ಹರಾಜಿನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.
ಜಾತ್ರೆಗೆ ಹರಿದು ಬಂದ ಭಕ್ತ ಸಾಗರ
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ
ರಥೋತ್ಸವಕ್ಕೆ ಭಕ್ತ ಸಾಗರದ ದಂಡು ಹರಿದು ಬಂದಿತ್ತು. ಅಕ್ಕಪಕ್ಕದ
ಆಂಧ್ರಪ್ರದೇಶ, ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಮತ್ತಿತರರ ಭಾಗಗಳಿಂದ ಭಕ್ತರು ತಿಪ್ಪೇಶನ
ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್,
ಮೊಳಕಾಲ್ಮೂರು ಕ್ಷೇತ್ರದ ಶಾಸಕ
ಎನ್.ವೈ.ಗೋಪಾಲಕೃಷ್ಣ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ
ಸೇರಿ ವಿವಿಧ ಜನಪ್ರತಿನಿಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಮೀನಾ,
ಡಿವೈಎಸ್ಪಿ ರಾಜಣ್ಣ ಅಪಾರಜಿಲ್ಲಾಧಿಕಾರಿ ಕುಮಾರಸ್ವಾಮಿ,
ಉಪವಿಭಾಗಾಧಿಕಾರಿ ಕಾರ್ತಿಕ್, ತಾಪಂ ಇಒ ಲಕ್ಷ್ಮಣ್, ತಹಶೀಲ್ದಾರ್
ರೇಹಾನ್ ಪಾಷ, ಪಟ್ಟಣ ಪಂಚಾಯತ್ ಪೌರಾಯುಕ್ತ ಪಾಲಣ್ಣ
ಇತರರಿದ್ದರು.
ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಅಹಿತರ ಘಟನೆಗಳು
ಸಂಭವಿಸದಂತೆ ಹಾಗೂ ವಾಹನ ವ್ಯವಸ್ಥೆ ಕುಡಿಯುವ ನೀರು
ಭದ್ರತೆವ್ಯವಸ್ಥೆ ಕಲ್ಪಿಸಲಾಗಿತ್ತು.
ರಥಕ್ಕೆ ಬಾಳೆಹಣ್ಣು ಹರಕೆ
ಇನ್ನು, ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಭಕ್ತರು ರಥಕ್ಕೆ
ಸೂರುಬೆಲ್ಲೆ ಮೆಣಸು,ಬಾಳೆ ಹಣ್ಣು ಎಸೆಯುವ ಮೂಲಕ ತನ್ನ
ಇಷ್ಟಾರ್ಥಗಳನ್ನು ಪೂರೈಸಿಕೊಂಡರು.
ಇದೇ ಸಂಧರ್ಭದಲ್ಲಿ ಈ ಸಲ ಕಪ್ ನಮ್ದ್ , ಆರ್ ಸಿ ಬಿ ಗೆ ಜಯ ಎಂಬ ಹೆಸರು ಬರೆದು ಬಾಳೆಹಣ್ಣು ರಥೋತ್ಸವಕ್ಕೆ ತೂರುವುದು ಹಾಗೂ
ಈ ವೇಳೆ 2024 ಕ್ಕೆ
ಲೋಕಾಸಭಾ ಚುನಾವಣೆಯಲ್ಲಿ ಬಿ.ಎನ್. ಚಂದ್ರಪ್ಪಗೆಲುವು ಎಂಬ
ಬಾಳೆ ಹಣ್ಣು ರಥಕ್ಕೆ ಎಸೆದಿರುವುದು ಕಂಡು ಬಂದಿದೆ. ಕೊಬರಿಸುಟ್ಟು
ಅರಕೆ ತೀರಿಸಿಕೊಂಡರು.
ಪಾದಯಾತ್ರೆ.
ಚಿತ್ರದುರ್ಗ, ಚಳ್ಳಕರೆ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು
ಶ್ರೀಗುರುತಿಪ್ಪೇಸ್ವಾಮಿಯ ದರ್ಶನ ಪಡೆಯಲು ಭಕ್ತರು ನೂರಾರು
ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ದೇವಸ್ಥಾನಕ್ಕೆ ಬಂದು ಸ್ವಾಮಿಯ
ದರ್ಶನ ಪಡೆದರು.