ಚಳ್ಳಕೆರೆ ನ್ಯೂಸ್ :
ಲೋಕಸಭಾ ಚುನಾವಣೆ-2024 ರ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಬಕಾರಿ ಅಕ್ರಮಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಅಜ್ಜನ ಗುಡಿ ರಸ್ತೆ, ಮಟನ್ ಮಾರುಕಟ್ಟೆ ಹತ್ತಿರ ವಾಹನ ತಪಾಸಣೆ ಮಾಡುತ್ತಿದ್ದಾಗ ಪಾಲ್ಗುಣ ನಾಯ್ಕ ರಾಮ್ ಜಿ ಹಟ್ಟಿ ತಾಂಡ ಚಳ್ಳಕೆರೆ ತಾಲ್ಲೂಕು ಎಂಬ ಆರೋಪಿತನ ಬಜಾಜ್ ಕಂಪನಿಗೆ ಸೇರಿದ ಪಲ್ಸರ್ ದ್ವಿ ಚಕ್ರದ ವಾಹನವನ್ನು ಪರಿಶೀಲಿಸಲಾಗಿ ಹೈವಾರ್ಡ್ಸ್ ಚಿಯರ್ಸ್ ವಿಸ್ಕಿ 90 ಮಿಲಿ ಸಾಮರ್ಥ್ಯದ 96 ಟೆಟ್ರಾ ಪ್ಯಾಕೇಟ್ಗಳು ದೊರೆತಿವೆ.
ಒಟ್ಟು- 8.640 ಲೀಟರ್ ಮದ್ಯ ಕಂಡುಬಂದಿದ್ದು ನಂತರ ಸಮಕ್ಷಮ ಪಂಚನಾಮೆಯೊಂದಿಗೆ ದೊರೆತ ಮದ್ಯವನ್ನು ಹಾಗೂ ಬಜಾಜ್ ಕಂಪನಿಗೆ ಸೇರಿದ ಪಲ್ಸರ್ ದ್ವಿ ಚಕ್ರ ವಾಹನವನ್ನು ಜಪ್ತುಪಡಿಸಿಕೊಂಡು ಘೋರ ಪ್ರಕರಣ ದಾಖಲಿಸಲಾಗಿದೆ.
ಹಾಗೂ ಇದೇ ದಿನ ವಿವಿಧ ಗ್ರಾಮಗಳಲ್ಲಿ ಅಬಕಾರಿ ದಾಳಿ ಮಾಡಲಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಲು ಅವಕಾಶ ಮಾಡಿಕೊಟ್ಟಿರುವ ಮೇರೆಗೆ 06ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
ಒಟ್ಟಾರೆ ಪ್ರಕರಣ ದಾಖಲಿಸಿ ಒಟ್ಟು 11.810 ಲೀಟರ್ ಅಕ್ರಮ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಒಟ್ಟು ಜಪ್ತುಪಡಿಸಿದ ಮಾಲಿನ ಮೌಲ್ಯ-61500. 00 ರೂಪಾಯಿಗಳು ಆಗಿರುತ್ತದೆ.