ಚಳ್ಳಕೆರೆ : ಶ್ರೀ ಯತ್ತಪ್ಪಸ್ವಾಮಿ ಮತ್ತು ಶ್ರೀ ರಂಗನಾಥಸ್ವಾಮಿ ದೇವಾಲಯದ ನೂತನ ಕಟ್ಟಡಕ್ಕೆ ಇಂದು ಶಂಕು ಸ್ಥಾಪನೆ ನೇರವೇರಿಸಿದರು.

ಚಳ್ಳಕೆರೆ ನಗರದ ಎರಡನೇ ವಾರ್ಡ್ ನಲ್ಲಿರುವ ಹಳೆ ದೇವಾಲಯದ ಸ್ಥಳದಲ್ಲಿ ನೂತನ ದೇವಸ್ಥಾನ ಕಟ್ಟಲಾಗುವುದು. ಎರಡು ದೇವಾಲಯದ ನಿರ್ಮಾಣಕ್ಕೆ ಬೆಳಗಿನಿಂದಲೇ ಪೂಜಾಕೈಂಕಾರ್ಯ ನೇರವೇರಿಸಿದರು.

ಶಂಕು ಸ್ಥಾಪನೆಗೆ ನೀರು ಬಳಸದೆ ಐದು ನೂರಕ್ಕೂ ಹೆಚ್ವು ಎಳನೀರನ್ನು ಉಪಯೋಗಿಸಿ ಸಿಮೆಂಟ್ ಮರಳನ್ನು ಮಿಶ್ರಣ ಮಾಡಿ ಅಡಿಗಲ್ಲಿಗೆ ಶಾಸ್ತ್ರೊಕ್ತವಾಗಿ ನೇರವೆರಿಸಿದರು. ಈ ದೇವಸ್ಥಾನದ 800 ಮನೆಗೂ ಹೆಚ್ವು ಅಣ್ಣತಮ್ಮಂದಿರಿಗೆ ಸೇರಿದ ಕಾಡುಗೊಲ್ಲ ಬುಡಕಟ್ಟು ಸಂಸ್ಕೃತಿಯ ಸಮುದಾಯಕ್ಕೆ ಸೇರಿದ ದೇವಾಲಯ.

ಎರಡು ದೇವಾಲಯಗಳನ್ನು ಶಿಲಮಟಂಪದಲ್ಲಿ ಮಾಡಲಿದ್ದು, ದೇವಾಲದ ನಿರ್ಮಾಣ ಮಾಡಲು ದೊಡ್ಡಬಳ್ಳಾಪುರದಿಂದ ಕಲ್ಲುಗಳನ್ನು ಬಳಸಲಿದ್ದಾರೆ.
ನೂತನ ದೇವಾಲಯ ನಿರ್ಮಾಣದ ಕಾಮಗಾರಿ ಕಾರ್ಕಳದ ಶಿಲ್ಪಗಳು ಮಾಡಲಿದ್ದಾರೆ.


ಗೌಡ್ರು ಚಿಕ್ಕಣ್ಣ, ಗೌಡ್ರು ನಾಗಣ್ಣ, ಕೆಎಂಎಫ್ ನಿರ್ದೇಶಕ ಸಿ ವೀರಭದ್ರಬಾಬು, ನಂದಗೋಕುಲ ಸೇವ ಸಮಿತಿ ಅಧ್ಯಕ್ಷ ಶ್ರೀನಿವಾಸ್, ತಿಪ್ಪೇಸ್ವಾಮಿ, ಬೂದಿಹಳ್ಳಿ ರಾಜಣ್ಣ, ಜಿಕೆ ವೀರಣ್ಣ, ಮಂಜುನಾಥ್, ಅಜ್ಜಯ್ಯ, ರಂಗಸ್ವಾಮಿ, ಪೂಜಾರಿ ದಾಸಪ್ಪಗಳು ಭಾಗವಹಿಸಿದ್ದರು.

About The Author

Namma Challakere Local News
error: Content is protected !!