ಚಳ್ಳಕೆರೆ: ಒಂದು ವರ್ಷದಿಂದ ಎರಡು ಗುಂಪುಗಳ ವಿವಾದದಿಂದ ಬಾಗಿಲು ಮುಚ್ಚಿದ್ದ ಗ್ರಾಮದ ಚಳ್ಳಕೆರಮ್ಮ ದೇವಿಯ ದೇವಸ್ಥಾನ ಇಂದು ಭಕ್ತರ ದರ್ಶನಕ್ಕೆ ತಹಶೀಲ್ದಾರ್ ಸಮ್ಮುಖದಲ್ಲಿ ಅನುವು ಮಾಡಿಕೊಟ್ಟಿತು
ಚಳ್ಳಕೆರೆ ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ನಡೆದ ಘಟನೆಯಾಗಿದೆ
ಹೌದು ನಿಜಕ್ಕೂ ಗ್ರಾಮದಲ್ಲಿ ಕಳೆದೊಂದು ವರ್ಷದಿಂದ ಎರಡು ಗುಂಪುಗಳ ಮಧ್ಯೆ ಗಲಾಬೆ ಸೃಷ್ಟಿಯಾಗಿ ದೇವರ ಗುಡಿ ಬಾಗಿಲು ಹಾಕುವ ಹಂತಕ್ಕೆ ತಲುಪಿ,
ಒಂದು ವರ್ಷದಿಂದ ಭಕ್ತಾರ ಸೇವೆಗೆ ಸಿಗದ ಚಳ್ಳಕೆರಮ್ಮ ದೇವಿ ದರ್ಶನಕ್ಕೆ ಇಂದು ತಹಶೀಲ್ದಾರ್ ಎನ್ ರಘುಮೂರ್ತಿ ನೇತೃತ್ವದಲ್ಲಿ ಭಕ್ತರು ದೇವಿ ದರ್ಶನ ಪಡೆದು ಪುನೀತರಾದರು.
ಈದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜಶೇಖರ, ಪಿಎಸ್ಐ ಕೆ ಸತೀಶ್ ನಾಯ್ಕ್, ಕಂದಾಯ ಅಧಿಕಾರಿ ಲಿಂಗೇಗೌಡ, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇನ್ನೂ ಮಾಧ್ಯಮ ದೊಂದಿಗೆ ಮಾತನಾಡಿದ
ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ, ಎರಡು ಗುಂಪುಗಳ ಒಳ ಜಗಳ ತಿಳಿಗೊಳಿಸಲಾಗಿದೆ.
ಒಂದು ವರ್ಷದ ಧ್ವೇಶ ಅಸೂವೆ ಇಂದು ಕೊನೆ ಗೊಂಡಿದೆ ಪ್ರತಿಯೊಬ್ಬರೂ ಕೂಡ ದೇವಿ ಕೃಪೆಗೆ ಪಾತ್ರರಾಗಬೇಕು, ಗ್ರಾಮದಲ್ಲಿ ಸ್ನೇಹ ಸೌಹಾರ್ದತೆಯಿಂದ ಸಹಕಾರ ಮನೋಭಾವನೆಯಿಂದ ಜೀವನ ನಡೆಸಬೇಕು ಎಂದಿದ್ದಾರೆ.