ಚಳ್ಳಕೆರೆ : ನಗರದ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇಡಿ.ಪ್ರಶಿಕ್ಷಣಾರ್ಥಿಗಳಿಗೆ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ “ಸ್ವಾಗತ ಸಮಾರಂಭ” ಮತ್ತು “ವಿದ್ಯಾರ್ಥಿ ಸಂಘದ ಉದ್ಘಾಟನೆ” ಹಾಗೂ 2021-2023ನೇ ಸಾಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಈ ಕಾರ್ಯಕ್ರಮಲ್ಲಿ ಪ್ರಾಚಾರ್ಯರಾದ ಹೇಮಂತರಾಜು ಪ್ರಾಸ್ತಾವಿಕವಾಗಿ ಮಾತನಾಡಿ “ಕಾಲೇಜಿನ ಆರಂಭದಿAದ ಇತ್ತೀಚಿನವರೆಗಿನ ವಿದ್ಯಾರ್ಥಿಗಳ ಶೈಕ್ಷಣೆಕ ಸಾಧನೆಯ” ಬಗ್ಗೆ ಹೇಳುತ್ತಾ, ಇಷ್ಟುದಿನಗಳ ಕಾಲ ಪ್ರಶಿಕ್ಷಾಣಾರ್ಥಿಗಳಾದ ನೀವುಗಳು ಇನ್ನು ಮುಂದೆ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಿ ಎಂದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಚಿತ್ರದುರ್ಗದ ಹಾಸ್ಯ ಸಾಹಿತಿ ಜಗನ್ನಾಥ , ಶಿಕ್ಷಕರು ತಮ್ಮ ತರಗತಿಯ ಬೋಧನೆಯಲ್ಲಿ ಹಾಸ್ಯಭರಿತ ಬೋಧನಾ ವಿಧಾನವನ್ನು ಅಳವಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳಿಗೆ ಪಾಠದ ವಿಷಯ ಅರ್ಥ ವಾಗಲು ಸಾಧ್ಯ” ಎಂದರು , ಅಲ್ಲದೆ ಹಲವಾರು ಹಾಸ್ಯಭರಿತ ಕವನಗಳನ್ನು ವಾಚಿಸಿ ಉಪನ್ಯಾಸಕರನ್ನು ಮತ್ತು ಪ್ರಶಿಕ್ಷಣಾರ್ಥಿಗಳನ್ನು ಮನರಂಜಿಸಿದರು.
ಕಾಲೇಜಿನ ವತಿಯಿಂದ 2021-2023 ನೇ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ನೇತ್ರಾವತಿ, ಸಿಮ್ರಾನ್ ಭಾನು, ಅರ್ಚನ, ಸುಷ್ಮ,ಬುಜ್ಜಮ್ಮ ಅವರನ್ನು ಸನ್ಮಾನಿಸಲಾಯಿತು,
ಈ ಕಾರ್ಯಕ್ರಮಗಳ ನಂತರ ಕಾಲೇಜಿನ ಹಿರಿಯ ಉಪನ್ಯಾಸಕ ರಾಘವೇಂದ್ರ ನಾಯಕ ಮಾತನಾಡಿ:- “ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಹೇಳಿ ನಂತರ, ವಿದ್ಯಾರ್ಥಿ ಸಂಘದ ವಿವಿಧ ಪದಾಧಿಕಾರಿಗಳ ಕರ್ತವ್ಯಗಳ “ಬಗ್ಗೆ ಕಿವಿಮಾತು ಹೇಳಿದರು.
ಉಪನ್ಯಾಸಕರಾದ ಕೆ.ಬಿ.ರವಿಕುಮಾರ್ “ಶಿಕ್ಷಣದ ಪ್ರಾಮುಖ್ಯತೆ ಮತ್ತು ಮೌಲ್ಯ ಶಿಕ್ಷಣದ ಮಾತನಾಡಿ ಸ್ವರಚಿತ ಕವನ ವಾಚಿಸಿದರು”.
ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಪ್ರಮೀಳ ಮಾತನಾಡಿ, ಬಿ.ಇಡಿ ಕಾಲೇಜಿನ ಉಪನ್ಯಾಸಕರ ಸೇವಾ ದಕ್ಷತೆಯನ್ನು ಮತ್ತು ಕಾಲೇಜಿನಲ್ಲಿ ದೊರೆಯುತ್ತಿರುವ ವಿವಿಧ ಸೌಲಭ್ಯಗಳ ಬಗ್ಗೆ ತಿಳಿಸಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 2023-2024 ನೇ ಸಾಲಿನ ವಿದ್ಯಾರ್ಥಿ ಸಂಘದ ವಿವಿಧ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಪ್ರಥಮ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು,
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ರಾಘವೇಂದ್ರ ನಾಯಕ, ಕೆ.ಬಿ.ರವಿಕುಮಾರ್, ದೊರೆಸ್ವಾಮಿ, ಕಲ್ಲೇಶ ವಿಶ್ವನಾಥ್, ಎ.ಬಿ.ನಾಗೇಶ್, ಶಾಮಸುಂದರ, ಪೂಜಾ, ಕಚೇರಿ ಅಧೀಕ್ಷಕರಾದ ವಾಣೆಶ್ರೀ, ಯತೀಶ್.ಎಂ. ಸಿದ್ದಾಪುರ,ಆಕಾಶ್, ತಿಪ್ಪೇಸ್ವಾಮಿ ಕೆ.ಹೆಚ್, ಶ್ರೀ ಕಾಂತ್,ಭೀಮಪ್ಪ, ಗಿರೀಶ್, ಸಿದ್ದಲಿಂಗಮ್ಮ, ಸೌಮ್ಯ ಇದ್ದರು