ನಾಯಕನಹಟ್ಟಿ::ಮಾ.22. ಮಧ್ಯ ಕರ್ನಾಟಕದ ಇತಿಹಾಸ ಪ್ರಸಿದ್ಧ. ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಯಿತು.
ಜಾತ್ರೆಗೆ ಇನ್ನೂ ಐದು ದಿನಗಳು ಬಾಕಿ ಇರುವ ಕಾರಣ ರಥಕ್ಕೆ ಕಳಸವನ್ನು ಪ್ರತಿಷ್ಠಾಪಿಸಲಾಗುತ್ತದೆ.
ಗ್ರಾಮದ ಬಾಬುದಾರರು ಕಳಸವನ್ನು ಪಟ್ಟಣದ ಒಳಮಠದಿಂದ ಸಾಂಪ್ರದಾಯಿಕ ವಿಧಿ ವಿಧಾನಗಳನ್ನು ಅನುಸರಿಸಿ ಪೂಜೆ ಮಾಡಿಕೊಂಡು ಮೆರವಣಿಗೆಯ ಮೂಲಕ ದೊಡ್ಡ ರಥದ ಬಳಿ ತಂದರು.
ನಂತರ ಕಂಬಳಿಯ ಗದ್ದಿಗೆ ಮೇಲಿಟ್ಟು ಶಾಸ್ತ್ಯುಕ್ತವಾಗಿ ಪೂಜೆ ಮಾಡಿ ಸುಮಾರು 32. ಕೆ. ಜಿ .ತೂಕದ ನೂತನ ಕಳಸವನ್ನು ಹಗ್ಗದ ಸಹಾಯದಿಂದ ರಥದ ಮೇಲಕ್ಕೆ ಎಳೆದು ಪ್ರತಿಷ್ಠಾಪಿಸಲಾಯಿತು.
ಇದೇ ವೇಳೆ ನೂರಾರು ಭಕ್ತರು ಮಹಿಳೆಯರು ತಿಪ್ಪೇರುದ್ರಸ್ವಾಮಿಗೆ ಜಯ ಘೋಷಣೆಗಳನ್ನು ಕೂಗಿದರು.
ಈ ಮೂಲಕ ವಿಧ್ಯುಕ್ತವಾಗಿ ಜಾತ್ರೆಗೆ ಚಾಲನೆ ನೀಡಲಾಯಿತು. ಕಳಸ ಪ್ರತಿಷ್ಠಾಪನೆ ನಂತರ ರಥಕ್ಕೆ ವಿವಿಧ ಬಣ್ಣಗಳ ಬಾವುಟಗಳನ್ನು ಜೋಡಿಸುವ ಕಾರ್ಯ ಮಾಡಲಾಗುತ್ತದೆ. ಹಾಗೂ ಈ ಆಚರಣೆಯ ಮೂಲಕ ಗ್ರಾಮದ ಪ್ರತಿಯೊಂದು ಸಮುದಾಯದ ಬಾಬುದಾರರು ದೈವಸ್ಥರು ಗ್ರಾಮಸ್ಥರಿಗೆ ಅಧಿಕೃತವಾದ ಆಹ್ವಾನ ನೀಡಲಾಗುತ್ತದೆ.
ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಎಚ್ ಗಂಗಾಧರಪ್ಪ, ಪಟ್ಟಣ ಪಂಚಾಯತಿ ಸದಸ್ಯ ಜೆ ಆರ್ ರವಿಕುಮಾರ್, ಡಿವೈಎಸ್ ಪಿ ರಾಜಣ್ಣ, ಪಿಎಸ್ಐ ಕೆ ಶಿವಕುಮಾರ್,
ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನ ಕಮಿಟಿಯ ಮಾಜಿ ಅಧ್ಯಕ್ಷ ಜೆ ಪಿ ರವಿಶಂಕರ್, ವ್ಯವಸ್ಥಾಪನ ಸಮಿತಿಯ ಸದಸ್ಯ ಕೆ ಎನ್ ತಿಪ್ಪೇರುದ್ರಪ್ಪ, ದೇವಸ್ಥಾನ ಸಿಬ್ಬಂದಿ ಎಸ್ ಸತೀಶ್, ಕೇಶವಮೂರ್ತಿ, ದಳವಾಯಿ ತಿಪ್ಪೇಸ್ವಾಮಿ, ಟಿ ತಿಪ್ಪೇಸ್ವಾಮಿ (ಧಣಿ), ಟಿ.ಓಬಳೇಶ್, ದಳವಾಯಿ ರುದ್ರಮನಿ, ದೊರೆ ತಿಪ್ಪೇಸ್ವಾಮಿ, ಎನ್ ಮಹಾಂತಣ್ಣ, ಉಮೇಶ್, ಸೇರಿದಂತೆ ಸಮಸ್ತ ಪಟ್ಟಣದ ಗ್ರಾಮಸ್ಥರು ಹೋಬಳಿಯ ವಿವಿಧ ಹಳ್ಳಿಗಳ ಗ್ರಾಮಸ್ಥರು ಭಕ್ತಾದಿಗಳು ಇದ್ದರು