ಚಳ್ಳಕೆರೆ ನ್ಯೂಸ್ :
ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಸಲುವಾಗಿ
ಕೇಂದ್ರ ಮಿಲಿಟರಿ ಸೇನಾ ಪಡೆ ನಗರದ ಪ್ರಮುಖ ಬೀದಿಗಳಲ್ಲಿ
ಪಥ ಸಂಚಲನ ನಡೆಸಿದರು.
ಇನ್ನೂ ಪಥ ಸಂಚಲನದ ನೇತೃತ್ವದ ವಹಿಸಿದ ತಹಶಿಲ್ದಾರ್ ರೇಹಾನ್ ಪಾಷ, ಡಿವೈಎಸ್ ಪಿ ಬಿಟಿ ರಾಜಣ್ಣ, ಇನ್ಸ್ಪೆಕ್ಟರ್ ಕೆ.ಕುಮಾರ್ ರವರು ನಗರದ ಪ್ರವಾಸಿ ಮಂದಿರದಿಂದ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ಹಾಗೂ ನೆಹರು ವೃತ್ತದ ಮೂಲಕ ಬಸವೇಶ್ವರ ವೃತ್ತದಿಂದ ಬಳ್ಳಾರಿ ರಸ್ತೆ, ಪಾವಗಡ ರಸ್ತೆ, ಈಗೇ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು.
ಇನ್ನೂ ಪೋಲಿಸ್ ವಾಹನಗಳ ಸೈರನ್ ಸದ್ದಿಗೆ ನಗರದ ಸಾರ್ವಜನಿಕರು ಹಾಗೂ ದಾರಿಹೋಕರು ರಸ್ತೆಯ ಪಕ್ಕದಲ್ಲಿ ನಿಂತು ನೋಡುವುದು ಕಂಡುಬಂದಿತು.
ಇಗೇ ಕೇಂದ್ರ ಪಡೆಯ ಪಥ ಸಂಚಲನದ ಜೊತೆಗೆ ಸ್ಥಳೀಯ ಪೊಲೀಸರು ಸಾಥ್ ನೀಡಿದರು.
ಇದೇ ಸಂಧರ್ಭದಲ್ಲಿ ಪಿಎಸ್ಐ ಕೆ.ಸತೀಶ್ ನಾಯ್ಕ್, ಪಿಎಸ್ ಐ ಶಿವರಾಜ್, ಪಿಎಸ್ಐ ಧರೇಪ್ಪ ಬಾಳಪ್ಪ ದೊಡ್ಡಮನಿ, ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.