ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯಲ್ಲಿ ಕುಡಿಯುವ ನೀರಿಗೆ ಈಗಾಗಲೇ ಕೆಲವು ಹಳ್ಳಿಗಳಲ್ಲಿ ತಾಂಡವಾಡುತ್ತಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಅನಿರ್ಯವಾತೆಯಿದೆ.
ಹೌದು ಪ್ರತಿ ವರ್ಷವೂ ಕೂಡ ಚಳ್ಳಕೆರೆ ತಾಲ್ಲೂಕು ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿನಿಂದ ದನಕರುಗಳ ಮೇವಿಗೆ ಬರ ಆವರಸಿತ್ತಿದೆ.
ಅದರಂತೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮನಹಳ್ಳಿ ತಾಂಡಾ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ ಎಂದು ಸಾರ್ವಜನಜಕರು ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ಒಂದು ಕಿಲೋಮೀಟರ್ ದೂರದಿಂದ ರೈತರ ಜಮೀನಿನಿಂದ ನೀರು ತರುತ್ತಿದ್ಧೆವೆ..
ಅದ್ದರಿಂದ ಈ ಕೂಡಲೇ ಕುಡಿಯುವ ನೀರನ್ನು ಹೊದಗಿಸಬೇಕು ಎಂದು ಪಿಡಿಓ ಓಬಣ್ಣನವರಿಗೆ ಮಾಹಿತಿ ನೀಡಿದ ಕೂಡಲೇ ತಕ್ಷಣವೇ ಕಾರ್ಯಪ್ರವೃತ್ತರಾದ ಪಿಡಿಓ ಈಗಾಗಲೇ ಇದ್ದ ಕೊಳವೆ ಬಾವಿಗೆ ಇನ್ನೂ ಹೆಚ್ಚಿನ ಪೈಪ್ ಬಿಡುವ ಮೂಲಕ ಹೆಚ್ಚಿನ ನೀರು ಸರಬರಾಜು ಮಾಡಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಶೀಘ್ರವಾಗಿ ಕುಡಿಯುವ ನೀರು ಹೊದಗಿಸಿದ ಅಧಿಕಾರಿಗೆ ಸಾರ್ವಜನಿಕರು ಧನ್ಯವಾದ ಅರ್ಪಿಸಿದ್ದಾರೆ.