ಚಳ್ಳಕೆರೆ ನ್ಯೂಸ್ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿ ಅಕ್ರಮ ಮಧ್ಯ ಸಾಗಾಟಕ್ಕೆ ಬ್ರೇಕ್ ಹಾಕಿದೆ ಆದರೆ
ಕೆಲವರು ಮಾತ್ರ ಪೋಲಿಸ್ ರ ಕಣ್ಣು ತಪ್ಪಿಸಿ ಅಕ್ರಮ ಎಸಗಲು ಹೋಗಿ ಪೊಲೀಸ್ ರ ಅತಿಥಿಯಾಗಿದ್ದಾರೆ.
ಅಂತಹ ಹಲವು ಪ್ರಕರಣಗಳನ್ನು ಭೇಧಿಸಿದ ಚಳ್ಳಕೆರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ತಂಡ ಕಳೆದ ನಾಲ್ಕು ದಿನಗಳಲ್ಲಿ ಸುಮಾರು ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅದರಂತೆ ಮಾರ್ಚ 20 ರ ಸಂಜೆ ತಾಲೂಕಿನ ಕಾಪರಹಳ್ಳಿ ಗ್ರಾಮದಲ್ಲಿ ಶಿವರಾಜ ಎಂಬುವವರು ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದು ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ಕೆ.ಸತೀಶ್ ನಾಯ್ಕ, ಒಟ್ಟು 1651 ರೂ ಬೆಲೆಯ ಮಧ್ಯವನ್ನು ವಶಪಡಿಸಿಕೊಂಡಿದ್ದು ಮತ್ತೊಂದು ಪ್ರಕರಣದಲ್ಲಿ ಸೈಯದ್ ಯೂಸುಫ್ ಮೇಲೆ
ಪ್ರಕರಣ ದಾಖಲಿಸಿದ್ದಾರೆ.
ಅದರಂತೆ ಮತ್ತೆ ದೊಡ್ಡೆರಿ ಹಾಗು ವಿಡಪನಕುಂಟೆ ಗ್ರಾಮದಲ್ಲಿ ಅಕ್ರಮ ಮಧ್ಯೆ ಮಾರಾಟ ಮಾಡುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಅದರಂತೆ ಪಿಎಸ್ ಐ ಶಿವರಾಜ್ ಕೂಡ ಚಳ್ಳಕೆರೆ ತಾಲೂಕು ವೀರದಿಮ್ಮನಹಳ್ಳಿ ಗ್ರಾಮದಲ್ಲಿ ಭಾಗ್ಯಮ್ಮ ಯಾವುದೇ ಸರ್ಕಾರದ ಅಧಿಕೃತ ಪರವಾನಿಗೆ ಇಲ್ಲದೆ ಮಧ್ಯಪಾನವನ್ನು ಸೇವನೆ ಮಾಡಲು ಅವಕಾಶ ಕಲ್ಪಿಸಿಕೊಟ್ಟ ಎಂದು ಬಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ
ಮತ್ತೊಂದು ಪ್ರಕರಣದಲ್ಲಿ
ಸಿದ್ದಾಪುರ ಗ್ರಾಮದ ಭೀಮಣ್ಣ ಇವರಮೇಲೆ ಪ್ರಕರಣ ದಾಖಲಿಸಿದ್ದಾರೆ ಒಟ್ಟಾರೆ ಅಕ್ರಮ ಮಧ್ಯ ಮಾರಾಟಕ್ಕೆ ಎಡೆಮುರೆ ಕಟ್ಟಲು ಪೊಲೀಸ್ ಇಲಾಖೆ ಸನ್ನದು ಹಾಗಿದೆ.