ಶಕ್ತಿಶಾಲಿ ಆನೆ ಕಟ್ಟಬಹುದು, ಹುಲಿ ಸಿಂಹ ಕಟ್ಟಿ ಹಾಕಬಹುದು ಆದರೆ ಮನಸ್ಸನ್ನು ಕಟ್ಟಿ ಹಾಕುವುದು ತುಂಬಾ ಕಷ್ಟ, ಇಂತಹ ಮನಸ್ಸನ್ನು ತೃಪ್ತಿಪಡಿಸುವುದು ಹಾಗೂ ಕಟ್ಟಿ ಹಾಕುವುದು ದೇವಸ್ಥಾನಗಳಲ್ಲಿ ಮಾತ್ರ ಸಾಧ್ಯ ಎಂದು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು

ಚಳ್ಳಕೆರೆ ತಾಲೂಕಿನ ಮರಿಕುಂಟೆ ಗ್ರಾಮದಲ್ಲಿ ಇಂದು ಶಿವ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ನಂತರ ಸಭೆಯಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು

ಬಟ್ಟೆ ಶುದ್ಧೀಕರಣಕ್ಕೆ ಸೋಪು ಶಾಂಪುಗಳಿವೆ, ಆದರೆ ಮನಸ್ಸು ಶುದ್ದಿಕರಣಕ್ಕೆ ಯಾವುದು ಸೋಪು ಶಾಂಪು ಇಲ್ಲ,,

ಮನಸನ್ನ ಶುದ್ದಿ ಮಾಡಿಕೊಳ್ಳುವುದಕ್ಕೆ ದೇವಸ್ಥಾನಗಳೇ ಕಾರಣ ದೇವಸ್ಥಾನಕ್ಕೆ ಬಂದರೆ ಸಾಕು ಮನಸ್ಸು ಶುದ್ಧಿಯಾಗುತ್ತದೆ.

ದೇವಸ್ಥಾನಗಳಿಗೆ ಬಂದಾಗ ದ್ವೇಷದಿಂದ ನೋಡುವವರನ್ನು ಸಹ ಪ್ರೀತಿಯಿಂದ ನೋಡುವಂತಹ ಮನಸ್ಸು ಬದಲಾಗುತ್ತದೆ.

ಅದಕ್ಕಾಗಿಯೇ ಒಂದು ಗ್ರಾಮ ಎಂದರೆ ಅಲ್ಲಿ ದೇವಸ್ಥಾನಗಳನ್ನು ಪುರಾತನಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ

ಅದರಂತೆ ಇಂದು ಈಶ್ವರನ ದೇವಸ್ಥಾನವನ್ನು ನಿರ್ಮಿಸಿ ಲೋಕಾರ್ಪಣೆ ಗೊಳಿಸಿದ್ದಾರೆ ಕಳೆದ ದಿನ ಮುಸ್ಲಿಂ ಸಮುದಾಯದ ರಂಜಾನ್ ಹಾಗೂ ಹಿಂದೂ ಸಮುದಾಯದ ಬಸವ ಜಯಂತಿ ಎರಡು ಸಹ ಒಟ್ಟಾಗಿ ಬಂದಿರುವುದು ಸಂತಸದ ವಿಚಾರ ಎಲ್ಲರಿಗೂ ಮೃತ್ಯು ಬರುತ್ತದೆ

ಮೃತ್ಯು ಎಂಬುದು ಗೊತ್ತು ಆದರೆ ಯಾವಾಗ ಎಲ್ಲರಿಗೂ ಎಲ್ಲಿ ಹೇಗೆ ಎಂಬುದು ಗೊತ್ತಿಲ್ಲ ದಿನಗಳು ಕಳೆದಂತೆಲ್ಲ ನಾವು ಸಾವಿಗೆ ಹತ್ತಿರವಾಗುತ್ತೆವೆ.

ಇಲ್ಲಿನ ತಹಸಿಲ್ದಾರ್ ಎನ್ ರಘುಮೂರ್ತಿ ಅವರು ಗ್ರಾಮದಲ್ಲಿ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಿದ್ದಾರೆ ಇಂತಹ ಅಧಿಕಾರಿಗಳು ದೇಶಕ್ಕೆ ಬೇಕು.

ಕಚೇರಿಯಲ್ಲಿ ಕುಳಿತು ಅಷ್ಟು ಇಷ್ಟು ಕೆಲಸ ಮಾಡಿ ಮನೆಗೆ ಹೋಗುವ ಅಧಿಕಾರಿಗಳಿದ್ದಾರೆ ಆದರೆ ಪ್ರತಿದಿನ ಪ್ರತಿಯೊಬ್ಬರ ಸಮಸ್ಯೆಯನ್ನು ಆಲಿಸಿ ಅವರ ಸಮಸ್ಯೆಯನ್ನು ಬಗೆಹರಿಸುತ್ತು ಬಂದರೆ ಸಮಸ್ಯೆ ಇಲ್ಲವಾಗುತ್ತದೆ

12ನೇ ಶತಮಾನದಲ್ಲಿ ಬಸವಣ್ಣ ಸಹ ಇದನ್ನೇ ಹೇಳಿದ್ದು ಕಾಯಕವೇ ಕೈಲಾಸ ಅದರಂತೆ ಪ್ರತಿಯೊಬ್ಬರು ತಮ್ಮ ತಮ್ಮ ಕಾರ್ಯಗಳನ್ನು ಮಾಡಿ ಎಂದು ಆಶೀರ್ವಚನ ನೀಡಿದರು.

ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ತಹಶೀಲ್ದಾರ್ ಎನ್ ರಘುಮೂರ್ತಿ, ಸಾಹಿತಿ ತಿಪ್ಪಣ್ಣ ಮರಿಕುಂಟೆ, ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜಶೇಖರ, ಸದಸ್ಯರಾದ ಶ್ರೀಮತಿ ಮಾಲಾಶ್ರೀ ತಿಪ್ಪೇರುದ್ರಪ್ಪ, ಶ್ರೀಮತಿ ಓಬಳಮ್ಮ ಗೋವಿಂದಪ್ಪ, ಹೊಸಟ್ಟಿ ರಾಜಣ್ಣ, ಹಾಗೂ ಮುಖಂಡರಾದ ವೀರಭದ್ರಪ್ಪ, ವಿಜಯಪ, ಅಂಜಿನಪ್ಪ, ಓಬಣ್ಣ, ಪೂಜಾರಿ ಗೋವಿಂದಪ್ಪ, ಮಹಾಂತೇಶ, ಮತ್ತು ಯುವ ಮುಖಂಡರಾದ ಓಬಳೇಶ್ ,ನರಸಿಂಹಮೂರ್ತಿಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!