ಚಳ್ಳಕೆರೆ
ಕೇಂದ್ರ ಸರ್ಕಾರದಿಂದ ನೀಡಲಾಗುವ 29 ರೂ. ಕೆಜಿ ಭಾರತ್ ಅಕ್ಕಿಗಾಗಿ ಮುಗಿ ಬಿದ್ದ ಸಾರ್ವಜನಿಕರು.
ಹೌದು
ಇದು ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಸೂಜಿಮಲ್ಲೇಶ್ವರ ನಗರದಲ್ಲಿ ಸುಮಾರು ಸಾರ್ವಜನಿಕರಿಗೆ, ಕೇಂದ್ರ ಸರಕಾರದ ಭಾರತ್ ಅಕ್ಕಿ ವಿತರಣೆ ಮಾಡಲಾಗಿದೆ.
ಇನ್ನೂ ಅಕ್ಕಿ ತುಂಬಿದ ಲಾರಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ
ಯಾವುದೇ ಮುಂಜಾಗ್ರತೆ ಹಾಗೂ ಸಾರ್ವಜನಿಕ ರಸ್ತೆ ಬದಿಯಲ್ಲಿ 10 ಕೆ.ಜಿ ತೂಕದ ಅಕ್ಕಿಯ ಪಾಕೇಟ್ ನ್ನು ಫಲಾನುಭವಿಗಳಿಂದ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ನಂಬರ್ ಪಡೆದು 29 ರೂ ನಂತೆ ಹತ್ತು ಕೆ.ಜಿ.ಪಾಕೇಟ್ ಲಾರಿಯಿಂದ ವಿತರಣೆ ಮಾಡುವುದು ಕಂಡು ಬಂದಿತು.
ಕೆಲವರು ಬಂದು ಗಲಾಟೆ ಮಾಡಿದ್ದರಿಂದ ವಿತರಣೆ ಮಾಡದೆ ಮುಂದೆ ಹೋಗಿದ್ದಾರೆ. ಕೇಂದ್ರದ ‘ಭಾರತ್’ ಬ್ರಾಂಡ್ ಅಕ್ಕಿಯನ್ನುಕೆಜಿ 29 ರೂಪಾಯಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ
‘ಭಾರತ್’ ಅಕ್ಕಿಯು ಕೇಂದ್ರೀಯ ಭಂಡಾರ್, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED), ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ನ ಎಲ್ಲಾ ಭೌತಿಕ ಮತ್ತು ಮೊಬೈಲ್ ಮಳಿಗೆಗಳಲ್ಲಿ ಹಾಗೂ. ಇತರ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡಬೇಕು
ಎಂಬ ನಿಯಮವಿದೆ ಆದರೆ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಆಧಾರ್ ಹಾಗೂ ಮೊಬೈಲ್ ಸಂಖ್ಯೆ ಪಡೆದು ವಿತರಣೆ ಮಾಡುತ್ತಿರುವುದನ್ನು ಕೆಲವರು ವಿರೋಧ ವ್ಯಕ್ತ ಪಡಿಸಿದ್ದರಿಂದ ಆಗಲೆ ಅರ್ಧ ಲೋಡ್ ಅಕ್ಕಿ ವಿತರಣೆ ಮಾಡಿದ್ದರು
ವಿರೋಧ ಮಾಡಿದ ತಕ್ಷಣ ಲಾರಿ ಮುಂದಕ್ಕೆ ಹೋಗಿದೆ ಕೇಂದ್ರ ಸರಕಾರ ಭಾರತ್ ಬಾಂಡ್ ಅಕ್ಕಿ ವಿತರಕರು ಯಾರು? ಇದರ ಉಸ್ತುವರಿ ಯಾರೂ ? ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಅಕ್ಕಿ ವಿತರಣೆ ಮಾಡುತ್ತಿರುವ ಬಗ್ಗೆ ಈಗ ನಾಗರೀಕಲ್ಲಿ ಅನುಮಾನಕ್ಕೆ ಎಡೆಮಾಡಿದ್ದು
ರಸ್ತೆ ಬದಿಯಲ್ಲಿ ಭಾರತ್ ಅಕ್ಕಿ ವಿತರಣೆ ಮಾಡುತ್ತಿರುವ ವೀಡಿಯೋ ಎಲ್ಲೆಡೆ ಈಗ ವೈರಲ್ ಹಾಗುತ್ತಿದೆ.