ವರದಿ : ಹರೀಶ್ ತಿಮ್ಮಪ್ಪಯ್ಯನಹಳ್ಳಿ

ಚಳ್ಳಕೆರೆ : ರಸ್ತೆಯಲ್ಲಿ ಅಪಘಾತ ತಡೆ ಅಪಘಾತ ತಡೆ ಜಾಗೃತಿಗೆ ಮುಂದಾದ ಸಂಜೀವಿನಿ ರಂಗಸ್ವಾಮಿ ಇಂದು ದೇಶದಲ್ಲಿ ರಸ್ತೆ ಅಪಘಾತ ಒಂದು ಸಮಾಜಿಕ ಪೀಡುಗು ಆಗಿ ಜನರನ್ನು ಕಾಡುತ್ತಿದೆ. ಇಂತಹ ಒಂದು ಸನ್ನಿವೇಶದಿಂದ ರಂಗಸ್ವಾಮಿ ಎಂಬ ಯುವಕ ಅಪಘಾತಗಳನ್ನು ಚಿಕ್ಕಂದಿನಿAದ ಅಂದರೆ ವಿದ್ಯಾರ್ಥಿಯಾದಗಿನಿಂದಲೂ ನಿತ್ಯವು ನೋಡಿ ತನ್ನ ಮನಸ್ಸಿನ ಮೇಲೆ ಉಂಟಾದ ಪರಿಣಾಮದಿಂದ ಪ್ರಭಾವಿತನಾಗಿ ಸಮಾಜದಲ್ಲಿ ಏನಾದರು ಒಂದು ಬದಲಾವಣೆ ಬಯಸಿ ರಸ್ತೆ ಅಪಘಾತಗಳ ತಡೆ ಹಿಡಿಯುವ ನಿಟ್ಟಿನಲ್ಲಿ ಕೈಗೊಂಡ ಕಾರ್ಯವೇ ಸಂಜೀವಿನಿ.

ಕಾರ್ಯ ಮೊದಲಿಗೆ ಒಂದೇರೆಡು ಕಡೆ ಸ್ನೇಹಿತರ ಸಹಕಾರದಿಂದ ಶುರುವಾದ ಜಾಗೃತಿ ಫಲಕಗಳ ಅಳವಡಿಸುವ ಕಾರ್ಯ ಇಂದು ಸಾವಿರಾರು ಜಾಗೃತಿ ಫಲಕಗಳನ್ನು ಅಳವಡಿಸಿ, ಸಾವಿರಾರು ರಸ್ತೆ, ಗುಂಡಿಗಳನ್ನು ಮುಚ್ಚಿ, ಸಾವಿರಾರು ಅಪಘಾತಗಳಲ್ಲಿ ನೆರವು ನೀಡುವ ಮಟ್ಟಕ್ಕೆ ಬೆಳೆದು ನಿಂತಿವೆ.

ರಸ್ತೆ ಸುರಕ್ಷತೆಗೆ ಸಂಬAಧಿಸಿದAತೆ, ನಗರ ಮತ್ತು ಗ್ರಾಮೀಣ ಭಾಗದ ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ಪಾಠ ಪ್ರವಚನಗಳನ್ನು ಮಾಡಿ ಅವರೆಲ್ಲರಿಗೂ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿ ಇಂದು ಕೋಟೆಗಳ ನಾಡು ಚಿತ್ರದುರ್ಗ ಜಿಲ್ಲೆಯಲ್ಲೆ ಜೀವ ರಕ್ಷಕ ಎಂಬ ಬಿರುದಿಗೆ ಭಾಜನರಾಗಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳು ಎಂಬ ಗ್ರಾಮದ ಬಡ ಮಧ್ಯಮ ಕುಟುಂಬದಲ್ಲಿ ಜನಸಿದ ಯುವಕ ರಂಗಸ್ವಾಮಿ.ಡಿ ಮೊದಲಿಗೆ ರಂಗಸ್ವಾಮಿ ಎಂಬ ವ್ಯಕ್ತಿಯಿಂದ ಹಾಗೂ ಆತನ ಸಹೋದರರಿಂದ, ಸ್ನೇಹಿತರಿಂದ ಶುರುವಾಗ ಒಂದು ಚಿಕ್ಕ ಸೇವಾ ಮನೋಭಾವದ ಕಾಯಕ ಇಂದು ಸಂಜೀವಿನಿ ಎಂಬ ಬೃಹತ್ ವಿದ್ಯಾರ್ಥಿ ಸೈನವೇ ಉದಯಿಸಿದೆ.

ಸಂಜೀವಿನಿ ಕೆಲಸವೆಂದರೆ ರಸ್ತೆ ಅಪಘಾತಕ್ಕೊಳಗಾದವರಿಗೆ ತುರ್ತಾಗಿ ಪ್ರಾರ್ಥಮಿಕ ಚಿಕಿತ್ಸೆ ಹಾಗೂ ಶೀಘ್ರವಾಗಿ ರಕ್ಷಣೆಗೆ ಸ್ಪಂದಿಸಿ ತಕ್ಷಣ ಸ್ಥಳಿಯ ಆಸ್ಪತ್ರೆಗೆ ಅಥವಾ ಸ್ಥಳಿಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ನೆರವು ಒದಗಿಸುವುದಾಗಿದೆ.

ಇಂದು ಸಂಜೀವಿನಿ ತಂಡದಲ್ಲಿ ಸಾವಿರಾರಿ ವಿದ್ಯಾರ್ಥಿಗಳ ಬೃಹತ್ ಒಕ್ಕೂಟವಾಗಿ ಹೊರ ಹೊಮ್ಮಿದೆ. ಹಲವಾರು ಸೆಲೆಬ್ರಿಟಿಗಳು ಸಂಜೀವಿನಿ ಕೆಲಸಗಳನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಹರಿಸಿ ಆಶೀರ್ವದಿಸಿದ್ದಾರೆ.

ಸಹಾಯದ ಹಸ್ತದ ಮೂಲಕ ನೆರವು ನೀಡಿದ್ದಾರೆ. ಮೊದಲಿಗೆ ರಂಗಸ್ವಾಮಿ ತಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ತನ್ನ ಸ್ನೇಹಿತನೊಬ್ಬ ರಸ್ತೆ ಅಪಘಾತದಲ್ಲಿ ಮರಣ ಹೊಂದಿದಾಗ ಏನಾದರು ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ರಸ್ತೆ ಅಪಘಾತವಾಗುವುದನ್ನು ತಡೆಯಲು ಮುಂದಾರು.

ರಸ್ತೆ ಸುರಕ್ಷಿತಗಾಗಿ ಶ್ರಮೀಸಲು ಶುರು ಮಾಡಿದ ರಂಗಸ್ವಾಮಿಗೆ ನೆರವಾಗಿದ್ದು, ತಾನು ರಜಾ ದಿನಗಳಲ್ಲಿ ಕಲಿತ್ತಿದ್ದ, ಪೈಂಟ್ ಕೆಲಸ ಅದರಲ್ಲಿ ಅಷ್ಟೊ, ಇಷ್ಟೊ ದುಡಿದು ಬಂದ ಹಣದಲ್ಲಿ ಹಾಗೂ ಮನೆಯಲ್ಲಿ ನೀಡುತ್ತಿದ್ದ ಅಲ್ಪಸ್ವಲ್ಪ ಹಣದಲ್ಲಿ ಬಣ್ಣ-ಸುಣ್ಣ ಖರಿದಿಸಿ ಸಣ್ಣದಾಗಿ ಸ್ನೇಹಿತರೊಂದಿಗೆ ಜಾಗೃತಿ ಮೂಲಕ ಬರೆಯಲು ಮುಂದಾಗುತ್ತಾನೆ.

ರಂಗಸ್ವಾಮಿ ಬಿ. ತದ ನಂತರ ಸ್ನೇಹಿತರು ಅಲ್ಪ ಹಣ ನೀಡಿ ರಸ್ತೆಗಳಲ್ಲಿನ ಹಂಪ್ಸ್ಗಳಿಗೆ ಸುಣ್ಣ ಬಳಿದ ನಂತರ ಅಪಘಾತ ವಲಯಗಳಲ್ಲಿ ನಿಧನವಾಗಿ ಚಲಿಸಿ ಇದು ಅಪಘಾತ ವಲಯ ಎಂದು ಎಚ್ಚರಿಕೆ ಸಂದೇಶ ಬರೆದು ವಾಹನ ಸವಾರರನ್ನು ಎಚ್ಚರಿಸುವ ಮೂಲಕ ನಡೆದ ಕಾರ್ಯ ಇಂದು ಬೃಹತ್ ಸಂಜೀವಿನಿ ಕಾರ್ಯವಾಗಿದೆ. ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲ ತುರ್ತಾಗಿ ಸೇವೆ ಒದಗಿಸಲು ವ್ಯಾಟ್ಸಪ್ ಸಹಕಾರದಿಂದ ರಾಜ್ಯದಲ್ಲಿ ಗ್ರೂಪ್‌ಗಳನ್ನು ಮಾಡಿಕೊಂಡು ಯಾರಿಗೆ ಸಹಾಯ ಬೇಕಾದಲ್ಲಿ ನೆರವಾಗಲು ಮುಂದಾಗಿದೆ ಸಂಜೀವಿನಿ ತಂಡ.

ಇನ್ನು ಅಪಘಾತವಾದರೆ ತುರ್ತಾಗಿ ಬೇಕಾಗುವುದು ರಕ್ತ, ಅಂತಹ ರಕ್ತವನ್ನು ಕ್ಷಣ ಮಾತ್ರದಲ್ಲಿ ಒದಗಿಸಿ ಹಲವಾರು ಪ್ರಾಣ ರಕ್ಷಣೆಗೂ ಸಂಜೀವಿನ ಸದಾ ಸಿದ್ದವಾಗಿದೆ. ಇದಕ್ಕೂ ಸಂಜೀವಿನಿಗೆ ನೆರವಾಗಿರುವುದು ರಾಜ್ಯಾಂದ್ಯAತ ಸಂಜೀವಿನಿ ಹೆಸರಿನಲ್ಲಿರುವ ಗ್ರೂಪುಗಳು ಇಂತಹ ಯಾವುದೇ ಫಲಪೇಕ್ಷೆ ಇಲ್ಲದೇ ತನ್ನ ಮನೆ ಕೆಲಸ ಕಾರ್ಯಗಳನ್ನ ಬಿಟ್ಟು ಸಮಾಜದ ಸೇವೆ ಮಾಡಲು ಮುಂದಾದ ರಂಗಸ್ವಾಮಿಯನ್ನು ಮೆಚ್ಚಿ ಹೊಗಳಿದ ಮೊದಲಿಗರು ಕರ್ನಾಟಕದ ರಾಜಕುಮಾರ ಪವರ್‌ಸ್ಟಾರ್ ದಿ|| ಡಾ||ಪುನಿತ್ ರಾಜ್‌ಕುಮಾರ್, ಬೆಂಗಳೂರಿನಲ್ಲಿ ಯುವರತ್ನ ಸಿನಿಮದ ಶೂಟಿಂಗ್ ಸಮಯದಲ್ಲಿ ರಂಗಸ್ವಾಮಿಯವರನ್ನು ಕರೆಯಿಸಿ ಆತನ ಕಾರ್ಯಕ್ಕೆ ಮೊದಲು ಪ್ರಶ್ನಾಂಶೆ ವ್ಯಕ್ತ ಪಡಿಸಿದ್ದರು.

ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಕಾರ್ಯಗಳನ್ನು ಮಾಡಲು ಪ್ರೇರೆಪಿಸಿದ್ದರು. ತಮ್ಮ ಕೈಲಾದ ಸಹಾಯ ಮಾಡುವ ಭರವಸೆ ನೀಡಿದ್ದರು ಆದರೆ ಇಂದು ಅವರು ನಮ್ಮೊಂದಿಗೆ ಇಲ್ಲ. ಆದರೆ ಅವರ ಆಶೀರ್ವಾದವಿದೆ ಎಂದು ಅಪ್ಪುವನ್ನು ಸ್ಮರಿಸುತ್ತಾರೆ ರಂಗಸ್ವಾಮಿ. ಇನ್ನೂ ಅಪ್ಪುವಿನಿಂದ ಮೊದಲಾಗಿ ಇಡೀ ಕರ್ನಾಟಕ ಚಿತ್ರಮಂದಿರದ ಅನೇಕ ಸ್ಟಾರ್ ನಟಗಳಾದ ರಾಕಿಂಗ್ ಸ್ಟಾರ್ ಯಶ್, ಡಾಲಿ ಧನಂಜಯ, ರಿಷಬ್ ಶೆಟ್ಟಿ, ವಶಿಷ್ಟ ಸಿಂಹ, ಹಲವಾರು ಶುಭ ಕೋರಿದ್ದಾರೆ.

ಇದಷ್ಟೆ ಅಲ್ಲದೇ ಸಾಹಿತಗಳಾದ ಚಂದ್ರಶೇಖರ್ ಪಾಟೀಲ್, ಪರಮ ಪೂಜ್ಯರುಗಳಾದ ಚಿತ್ರದುರ್ಗ ಮುರುಘಾ ಮಠದ ಶ್ರೀ ಮುರುಘ ರಾಜೇಂದ್ರ ಶ್ರೀ ಗಳು, ತುಮಕೂರಿನ ಸಿದ್ದಗಂಗ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸೇರಿದಂತೆ ಇನ್ನೂ ಹಲವಾರು ಗಣ್ಯಮಾನ್ಯರು ಸಂಜೀವಿನಿ ಕೆಲಸವನ್ನು ಮತ್ತು ಸಾಧನೆಯನ್ನು ನೋಡಿ ಹೆಮ್ಮೆಯಿಂದ ಶುಭ ಹಾರೈಸಿದ್ದಾರೆ.

ಇದಷ್ಟೆ ಅಲ್ಲದೇ ಹಲವಾರು ಪ್ರಶಸ್ತಿಗಳು ಕೂಡ ಸಂಜೀವಿ ಜೀವ ರಕ್ಷಕ ರಂಗಸ್ವಾಮಿಗೆ ಸಂದಿವೆ, ಪ್ರಜಾವಾಣಿ ಯುವ ಸಾಧಕ 2020 ರ ಪ್ರಶಸ್ತಿ, 2022ರ ಡೆಕ್ಕನ್ ಹೆರಾಲ್ಡ್ ಪತ್ರಿಕೆಯವರು ನೀಡುವ ಚೆಂಜ್ ಮೇಕರ್ ಆಫ್ ಸೋಸೈಟಿ, ಕನ್ನಡದ ಪ್ರತಿಷ್ಠಿತಿ ಸುದ್ದಿ ವಾಹಿನಿಯಾದ ಪಬ್ಲಿಕ್ ಟಿವಿಯ ಪಬ್ಲಿಕ್ ಹಿರೋ, ಚಿತ್ರದುರ್ಗದ ಇನ್ನರ್ವೀಲ್‌ಕ್ಲಬ್ ನೀಡುವ ಆಪ್ತಮಿತ್ರ ಪ್ರಶಸ್ತಿ, ಗ್ರಾಮ ಪಂಚಾಯಿತಿ ಚುನಾವಣೆ ಸಮಯದಲ್ಲಿ ಚಿತ್ರದುರ್ಗದ ಚುನಾವಣೆ ರಾಯಭಾರಿ ಹಿಗೆ ಇನ್ನೂ ಹಲವಾರು ಪ್ರಶಸ್ತಿಗಳು ರಂಗಸ್ವಾಮಿಗೆ ಸಂಧಿವೆ. ಆದರೆ ಇಂತಹ ಚಿಕ್ಕ ವಯಸ್ಸಿನಲ್ಲಿ ಸಾವಿರಾರು ಜೀವಳ ರಕ್ಷಣೆಯಲ್ಲಿ ಭಾಗಿಯಾರುವ ರಂಗಸ್ವಾಮಿಯವರ ಸಾಧನೆ ಗುರುತಿಸುವುದು ಸರ್ಕಾರ ಮತ್ತು ಆಡಳಿತ ಪಕ್ಷದ ಕೆಲಸವಾಗಬೇಕಾಗಿದೆ.

About The Author

Namma Challakere Local News
error: Content is protected !!