ಚಳ್ಳಕೆರೆ : ದಿನ ನಿತ್ಯ ತಮ್ಮ ಕಾಯಕ ನಿಷ್ಠೆ ಮೆರೆಯುವ ಕಾರ್ಮಿಕ ವರ್ಗಕ್ಕೆ ಇಂದು ವಿಶೇಷ ದಿನವಾಗಿದೆ ಆದ್ದರಿಂದ ಅವರ ದಿನಾಚರಣೆ ಅವರ ಕಾಯಕದ ಮೂಲಕ ಆಚರಿಸುವುದು ಸಂತಸ ತಂದಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷ ನನ್ನಿವಾಳ ಬಸವರಾಜ್ ಹೇಳಿದರು
ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ಕಾಮಗಾರಿಯ ಭೂಮಿ ಪೂಜೆ ನೆರೆವೆರಿಸಿ ಮಾತನಾಡಿದರು.
ಕಾರ್ಮಿಕ ದಿನಾಚರಣೆ ಪ್ರಯುಕ್ತ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಹೂವಿನಹಾರ ಹಾಕಿ ಅಭಿನಂದಿಸಿ, ಸಿಹಿ ವಿತರಿಸಿರುವುದು ಸಂತಸ ತಂದಿದೆ
ನರೇಗಾ ಯೋಜನೆಯಡಿ ₹ 10 ಲಕ್ಷ ಹಾಗೂ 15 ನೇ ಹಣಕಾಸು ಯೋಜನೆಯಡಿ ₹ 5 ಲಕ್ಷ ಸೇರಿ ಒಟ್ಟು ₹ 15 ಲಕ್ಷ ಕಸ ವಿಲೇವಾರಿ ಘಟಕ ಕಾಮಗಾರಿ ಕಾರ್ಮಿಕ ದಿನಾಚರಣೆಯಂದು ಭೂಮಿ ಪೂಜೆ ನಡೆಯುತ್ತಿರುವುದು ಕಾಯಕ ನಿಷ್ಠೆ ಯಾಗಿದೆ.
ಕಾರ್ಮಿಕರ ದಿನಾಚರಣೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಲೆನಿನ್, ಕಾರ್ಲ್‌ಮಾರ್ಕ್ಸ್, ಡಾ.ಬಿ.ಆರ್. ಅಂಬೇಡ್ಕರ್ ಅವರು ಕಾರ್ಮಿಕರ ಏಳ್ಗೆಗಾಗಿ ರೂಪಿಸಿದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಪಿಡಿಓ ಪಾಲಯ್ಯ ಮಾತನಾಡಿ, ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯವನ್ನು ಕಾರ್ಮಿಕರಿಗೆ ಒದಗಿಸುವ ಮೂಲಕ ಅವರ ಹಿತವನ್ನು ಕಾಪಾಡಬೇಕು’ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನಯ್ಯ, ಶಿವಮ್ಮ, ರಾಜಣ್ಣ, ಸಣ್ಣಬೋರಮ್ಮ ಮಾತನಾಡಿದರು.
ಗ್ರಾಮದ ಮುಖಂಡ ದೊರೆ ಬೈಯಣ್ಣ, ಅಪ್ಪಣ್ಣ, ದೊರೆ ನಾಗರಾಜ, ರವಿ,ಪಾಲಮ್ಮ, ಶಿವಣ್ಣ, ಜಯಮ್ಮ ಜಯಚಂದ್ರ ಇದ್ದರು.