ಚಳ್ಳಕೆರೆ ನ್ಯೂಸ್: ಬಾಲ್ಯದಲ್ಲಿ ಮಗುವಿಗೆ ಮೌಲ್ಯಯುತ ಗುಣಗಳನ್ನು ಬೆಳೆಸುವುದರ ಮೂಲಕ ಸಮಾಜದಲ್ಲಿ ಪ್ರಜೆಯಾಗಿ ಬೆಳೆಯುವುದಕ್ಕೆ ಬಾಲ್ಯದ ಶಿಕ್ಷಣ ಭದ್ರಬುನಾಧಿ ಎಂದು ನಾಗೇಶ್ ಹೇಳಿದರು.
ಅವರು ನಗರದ ಚಿಗುರು ಈ ಕಿಡ್ಸ್ ವತಿಯಿಂದ ಆಯೋಜಿಸಿದ್ದ 8ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಾಲ್ಯವಸ್ಥೆಯಲ್ಲೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಬೋಧನೆ, ಹಾಗೂ ಮೌಲ್ಯಯುತ ಗುಣಗಳನ್ನು ಬೆಳೆಸಬೇಕು, ಮಗುವಿನಆಸಕ್ತಿಗೆ ತಕ್ಕಂತೆ ಭೋಧನೆ ಕೈಗೊಳ್ಳಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಮಕ್ಕಳಿಗೆ ಕಲಿಸುವ ರೀತಿ , ಪಟನೆ, ಮಕ್ಕಳ ಮಾತುಗಾರಿಕೆ ಈ ಶಾಲೆಯ ಬೋಧನೆಯನ್ನು ಎತ್ತಿ ಹಿಡಿಯುತ್ತದೆ, ಮಗುವಿನ ಮಾನಸೀಕ ವಿಕಸನಕ್ಕೆ ಇಲ್ಲಿ ಪ್ರೇರಿಪಿಸಲಾಗುತ್ತಿದೆ.
ಮಕ್ಕಳು ಸಹ ಅಷ್ಟೇ ವೇಗವಾಗಿ ಕಲಿಯುತ್ತಿರುವುದು ಎಲ್ಲಾ ಪೋಷಕರಿಗೆ ಸಂತಸ ತರುತ್ತದೆ. ಎಂದರು
ಚಿಗುರು ಈ ಕಿಡ್ಸ್ ಪ್ರಿ ಸ್ಕೂಲ್ ಸಂಸ್ಥೆಯ ಅಧ್ಯಕ್ಷರಾದ ಜಡೆಕುಂಟೆ ಎನ್.ಚಿಕ್ಕಣ್ಣ ಮಾತನಾಡಿ, ನಮ್ಮ ಸಂಸ್ಥೆ 8ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿ ಇದ್ದೆವೆ, ಇಲ್ಲಿ ಉತ್ತಮ ಶಿಕ್ಷಕರ ವೃಂದ ಹೊಂದಿದ್ದು ಮಕ್ಕಳಿಗೆ ಉತ್ತಮ ಆಚಾರ ವಿಚಾರ ಮತ್ತು ಬೋಧನೆಯನ್ನು ನೀಡುತ್ತಿದ್ದಾರೆ ಇದರಿಂದಾಗಿಯೇ ನಮ್ಮ ಸಂಸ್ಥೆ ಹೆಸರನ್ನು ನಮ್ಮ ಶಾಲೆಯ ಮಕ್ಕಳೇ ಈ ಶಾಲೆಗೆ ಕೀರ್ತಿ ತರುತ್ತಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ
ಗ್ರಾಮ ಲೆಕ್ಕಧಿಕಾರಿ ಹರೀಶ್, ಶಿಕ್ಷಕರಾದ ನಾಗೇಶ್, ಐ ಎಂ. ಐ ಟಿ ಐ ಕಾಲೇಜು ಕಾರ್ಯದರ್ಶಿ ಸಯ್ಯದ್ ಅಹಮೋದ್, ಸಂಸ್ಥೆಯ ಅಧ್ಯಕ್ಷರು ಎನ್. ಚಿಕ್ಕಣ್ಣ, ಜಯಮ್ಮ ಕಾರ್ಯದರ್ಶಿ ಶಶಿಕುಮಾರ್ ರವರು
ಮುಖ್ಯಶಿಕ್ಷಕಿ ಸ್ಫೂರ್ತಿ ಎಸ್, ಪುಷ್ಪ, ಶಾಂತ, ಸಾವಿತ್ರಿ. ಉಪಸ್ಥಿತರಿದ್ದರು