ಅದ್ದೂರಿಯಾಗಿ ಜರುಗಿದ ಮಡಿವಾಳ ಮಾಚಿದೇವ ಜನಜಾಗೃತಿ ಸಮಾವೇಶ
ಚಳ್ಳಕೆರೆ: ತಳ ಸಮುದಾಯಗಳ ಜನರು ಶಿಕ್ಷಣವಂತರಾದಾಗ ಮಾತ್ರ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ ಮಡಿವಾಳ ಸಮುದಾಯದ ಬಾಂಧವರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸುವತ್ತ ಗಮನ ಹರಿಸಬೇಕಿದೆ ಎಂದು ಶ್ರೀ ಡಾ. ಬಸವ ಮಾಚಿದೇವ ಮಹಾಸ್ವಾಮಿ ಅಭಿಪ್ರಾಯಪಟ್ಟರು
ನಗರದ ವಾಸವಿ ಮಹಲ್ ನಲ್ಲಿ ತಾಲೂಕು ಮಡಿವಾಳರ ಸಂಘ ಯುವಕ ಸಂಘ ಮಡಿವಾಳಸರ್ಕಾರಿ ನೌಕರರ ಸಂಘ ಮಹಿಳಾ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಡಿವಾಳ ಸಮುದಾಯ ಇಂದು ನೆನ್ನೆಯದಲ್ಲ ತಲಾ ತಲಾಂತರದಿಂದ ಸರ್ವ ಸಮಾಜದ ಶುಚಿತ್ವದ ಕಾಯಕವನ್ನು ಮಾಡಿಕೊಂಡು ಬಂದಿದೆ ಕಾಯಕದ ನೆಪದಲ್ಲಿ ಸೇವೆ ಮಾಡುತ್ತಿದ್ದು ಸುಲಿಗೆ ಮಾಡುತ್ತಿಲ್ಲ ಪ್ರಾಮಾಣಿಕವಾಗಿ ಸ್ವಾಭಿಮಾನದ ಬದುಕಿನ ಕಷ್ಟಗಳನ್ನು ಎದುರಿಸುತ್ತಾ ಸಮಾಜ ಮುಂದುವರಿಯುತ್ತಿದೆ. ಮುಂದಿನ ಪೀಳಿಗೆಯ ಹಿತದಷ್ಟಿಯಿಂದ ತ್ಯಾಗದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಲ್ಲ ಮೇಲ್ವರ್ಗದ ಸಮುದಾಯಗಳು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರು ಸಹ ನಾವು ಅತ್ಯಂತ ಹಿಂದುಳಿದಿದ್ದೇವೆ ಆದರೆ ನಮ್ಮ ಪಾಲನ್ನು ಸಹ ಇತರರು ಕಿತ್ತುಕೊಳ್ಳುತ್ತಿರುವುದು ಶೋಚನೀಯ ಸ್ಥಿತಿಗೆ ಕಾರಣವಾಗಿದೆ.
ಮಡಿವಾಳ ಮಾಚಿದೇವರು ಜಾತ್ಯತೀತ ಮನೋಭಾವ ಹೊಂದಿದ್ದರಿಂದ ತನ್ನ ಕಾಯಕ ಮಾಡುತ್ತಲೇ ಸಮಾಜದ ಏಳಿಗೆಗೆ ಶ್ರಮಿಸಿ, ಮಹಾನ್ ಮಾನವತಾವಾದಿಯಾಗಿ ತಮ್ಮ ವಚನಗಳ ಮೂಲಕ ವಿಶ್ವಮಾನವರಾಗಿ ಹೊರ ಹೊಮ್ಮಿದ್ದಾರೆ.
ಮಡಿವಾಳ ಸಮುದಾಯ ಜಾಗೃತಾಗಲಿ ಎಂಬ ಕಾರಣಕ್ಕೆ ಇಂತಹ ಸಮಾವೇಶಗಳನ್ನು ಮಾಡುತ್ತಿದ್ದು ಸಮಾಜದ ಬಂಧುಗಳು ಸಂಘಟಿತರಾಗಿ ನಮ್ಮ ಸೌಲಭ್ಯಗಳನ್ನು ಪಡೆಯಲು ಹೋರಾಡಬೇಕಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜೀವನ ಕೌಶಲ್ಯ ತರಬೇತುದಾರ ಜಿಸಿ ರಾಜಶೇಖರ್ ಉಪನ್ಯಾಸ ನೀಡಿ ಮಡಿವಾಳ ಸಮುದಾಯ ಒಂದು ಹೊತ್ತಿನ ಉಪವಾಸವಿದ್ದರೂ ಪರವಾಗಿಲ್ಲ ಮಕ್ಕಳಿಗೆ ಆಸ್ತಿ ಮಾಡುವ ಬದಲು ಶಿಕ್ಷಣವನ್ನು ನೀಡುವ ಮೂಲಕ ಅದನ್ನೇ ಆಸ್ತಿಯನ್ನಾಗಿ ರೂಪುಗೊಳಿಸಿದರೆ ಸಮಾಜವು ಉದ್ಧಾರವಾಗಲು ಸಾಧ್ಯ ಜ್ಞಾನವೆಂಬ ಕೌಶಲ್ಯ ಉಳ್ಳ ಸಮುದಾಯದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ಅನಿವಾರ್ಯತೆ ಇದೆ ಕಳೆದ 76 ವರ್ಷಗಳಿಂದ ರಾಜಕೀಯವಾಗಿ ಪ್ರಾತಿನಿಧ್ಯ ಪಡೆಯಲು ಸಾಧ್ಯವಾಗದಿರುವುದಕ್ಕೆ ನಮ್ಮ ಸಮುದಾಯದ ಒಳ ಜಗಳಗಳೇ ಕಾರಣವಾಗಿದೆ ನಾವು ಎಷ್ಟು ವರ್ಷ ಬದುಕಿದ್ದೇವೆ ಎಂಬುದು ಮುಖ್ಯವಲ್ಲ ಇತರರಿಗಾಗಿ ಯಾವ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ ಹಾಗಾಗಿ ಸಮುದಾಯದ ಜನರು ಜಾಗೃತಾಗದಿದ್ದರೆ ಇಂತಹ ಸಮಾವೇಶಗಳು ಅರ್ಥ ಕಳೆದುಕೊಳ್ಳುತ್ತವೆ ಎಂದು ತಿಳಿಸಿದರು.
ಮಡಿವಾಳ ಸಮುದಾಯದ ರಾಜ್ಯಾಧ್ಯಕ್ಷ ಸಿ ನಂಜಪ್ಪ ಮಾತನಾಡಿ ಮೇಲ್ವರ್ಗದ ಜಾತಿಗಳು ಕಾಂತರಾಜ್ ವರದಿಯನ್ನು ವಿರೋಧಿಸುತ್ತಿರುವುದಕ್ಕೆ ಪ್ರಮುಖ ಕಾರಣ ತಳ ಸಮುದಾಯಗಳು ಹೆಚ್ಚು ಜನಸಂಖ್ಯೆ ಹೊಂದಿವೆ ಎಂಬ ಕಾರಣಕ್ಕೆ ವರದಿಯನ್ನು ತಿರಸ್ಕರಿಸಲು ಸರ್ಕಾರದ ಮೇಲೆ ಒತ್ತಡ ಹೇಳುತ್ತಿದ್ದಾರೆ ಏಕೆಂದರೆ ಅವರ ಸ್ಥಿತಿಗತಿಗಳ ಬಗ್ಗೆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ಈ ವರದಿಯನ್ನು ಸಲ್ಲಿಸಲು ಬಿಡುತ್ತಿಲ್ಲ ಇದರಿಂದಾಗಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದ್ದು ಮಡಿವಾಳ ಸಮುದಾಯ ಎಚ್ಚೆತ್ತುಕೊಂಡು ತಮಗೆ ಬರಬೇಕಾದ ಸೌಲಭ್ಯಗಳನ್ನು ಪಡೆಯಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಲ್ಯಾಬೋರೇಟರಿ ಮತ್ತು ಅಪೇಕ್ಷ ಝರಾಕ್ಸ್ ಸಹಯೋಗದಲ್ಲಿ ಹೊರ ತಂದಿದ್ದ ಶ್ರೀ ಮಡಿವಾಳ ಮಾಚಿದೇವ ಜೀವನ ಚರಿತ್ರೆ ಎಂಬ ಪುಸ್ತಕವನ್ನು ಬಸವ ಮಾಚಿದೇವ ಸ್ವಾಮೀಜಿಗಳು ಲೋಕಾರಪಣೆಗೊಳಿಸಿದರು
ಕಾರ್ಯಕ್ರಮದ ಕುರಿತು ಸಮಾಜದ ಗೌರವಾಧ್ಯಕ್ಷ ಎನ್ ಮಂಜುನಾಥ್ ಬಿ ರಾಮಪ್ಪ ತಾಲೂಕ ಅಧ್ಯಕ್ಷ ಬುಡ್ನಹಟ್ಟಿ ನಾಗರಾಜ್ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುನ್ನ ನಗರದ ಪ್ರವಾಸಿ ಮಂದಿರದಿಂದ ಕಲಾತಂಡಗಳೊಂದಿಗೆ ಮಡಿವಾಳ ಮಾಚಿದೇವರ ಹಾಗೂ ಸ್ವಾಮೀಜಿಯವರ ಮೆರವಣಿಗೆ ಶಾಸಕ ಟಿ ರಘುಮೂರ್ತಿ ಚಾಲನೆ ನೀಡಿದರು.
ಸಮಾಜದ ಬೇಡಿಕೆಗಳು: ಮಡಿವಾಳ ಸಮುದಾಯಕ್ಕೆ ಕರ್ನಾಟಕದಲ್ಲಿ ಮೀಸಲಾತಿ ಸೌಲಭ್ಯವಿಲ್ಲ ಮುಂದುವರಿದ ಸಮುದಾಯಗಳ ಜೊತೆಗೆ ಮೀಸಲಾತಿ ಸೇರಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಕೂಡಲೇ ನಮ್ಮ ಜನಾಂಗವನ್ನು ಎಸ್ ಸಿಗೆ ಸೇರಿಸಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು
ರಾಜಕೀಯ ಬಲವಿಲ್ಲದ ಮಡಿವಾಳರಿಗೆ ರಾಜಕೀಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವುದು ಸ್ಥಳೀಯ ಮಟ್ಟದಲ್ಲಿ ಜಿಲ್ಲೆ ತಾಲೂಕು ಗ್ರಾಮ ಪಂಚಾಯಿತಿ ನಗರಸಭೆ ಸ್ಥಾನಗಳಿಗೆ ಪ್ರತಿನಿತ್ಯ ಕೊಡುವುದು
ಪ್ರತ್ಯೇಕ ನಿಗಮ ಸ್ಥಾಪಿಸಿದ್ದಕ್ಕೆ ಇನ್ನು ಹೆಚ್ಚಿನ ಅಭಿವೃದ್ಧಿಗೆ ಸೂಕ್ತ ಆರ್ಥಿಕ ನೆರವು ನೀಡುವುದು
ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿ ನಿಲಯ ಸಮುದಾಯ ಭವನ ನಿರ್ಮಿಸಲು ಸೂಕ್ತ ನಿವೇಶನ ಇಲ್ಲದಿರುವ ಕಾರಣ ಎರಡು ಎಕರೆ ಭೂಮಿಯನ್ನು ಕೊಟ್ಟು ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಲು ಆರ್ಥಿಕ ಸಹಾಯ ನೀಡಬೇಕು
ಮಡಿವಾಳ ಜನಾಂಗದ ಮಹಿಳಾ ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ಅನುದಾನ ನೀಡುವುದು
ಗಂಗಾ ಕಲ್ಯಾಣ ಯೋಜನೆ ಅನುಷ್ಠಾನದಲ್ಲಿ ಮಡಿವಾಳರಿಗೆ ಪ್ರಾತಿನಿಧ್ಯ
ಅವಶ್ಯಕತೆ ಇರುವ ಕಡೆ ಧೋಬಿ ಘಾಟ್ ಗಳನ್ನು ನಿರ್ಮಿಸಿ, ಜೀವನಪಾಯಕ್ಕೆ ಅವಕಾಶ ಕಲ್ಪಿಸುವುದು
ಈ ಸಂದರ್ಭದಲ್ಲಿ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಬುಡ್ನಹಟ್ಟಿ ಎಂ ನಾಗರಾಜ್ ಉಪಾಧ್ಯಕ್ಷ ಪುಟ್ಟಲಿಂಗಪ್ಪ ಕಾರ್ಯದರ್ಶಿ ಕುಶ ಬಿ ಸಿ ಕುಶಾಲಪ ಖಜಾಂಚಿ ಹಾಟ್ಸನ್ ಪ್ರಕಾಶ್ ಮಾಜಿ ಪ್ರಭು ವೀರಣ್ಣ ಓಂಕಾರಪ್ಪ ಶೈಲಜಾ ಮಂಜುನಾಥ್ ಗಂಗಮ್ಮ ವೇದಮೂರ್ತಿ ಎಂಎನ್ ಮೃತ್ಯುಂಜಯ ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.