ನಾಯಕನಹಟ್ಟಿ:: ಮಾರ್ಚ್ ಮೂರರಿಂದ ಮಾರ್ಚ್ 6ರ ವರೆಗೆ ನಡೆಯಲಿರುವ ಹೋಬಳಿಯ ಎಲ್ಲಾ ಸಾರ್ವಜನಿಕರು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಧಿಕಾರಿ ಡಾ. ಮಹಮ್ಮದ್ ಮನವಿ ಮಾಡಿದರು.
ಭಾನುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು ರಾಜ್ಯದಾದ್ಯಂತ ಮಾರ್ಚ್ 3 ರಿಂದ ಮಾರ್ಚ್6 ರವರೆಗೆ ನಡೆಯಲಿರುವ ಪಲ್ಸ್ ಪೋಲಿಯೋ ಅಭಿಯಾನವು ನಮ್ಮ ಹೋಬಳಿ ವ್ಯಾಪ್ತಿಯಲ್ಲಿ ಯಶಸ್ವಿಯಾಗಲು ಹೋಬಳಿಯ ಎಲ್ಲಾ ಸಾರ್ವಜನಿಕರು ಸಹಕಾರ ನೀಡುವಂತೆ ತಿಳಿಸಿದರು.
ಇದೆ ವೇಳೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್ ಮಾತನಾಡಿ ನಮ್ಮ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು ಪೋಲಿಯೋ ಬೂತ್ 26 ಮತ್ತು ನಾಯಕನಹಟ್ಟಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಟ್ಟು ಇಪ್ಪತ್ತೇಳು ಪೋಲಿಯೋ ಬೂತ್ ತೆರೆಯಲಾಗಿದೆ.
ಏಳು ಪಲ್ಸ್ ಪೋಲಿಯೋ ಸೇವ ಕೇಂದ್ರಗಳಾದ ಬೋಸೆದೇವರಹಟ್ಟಿ, ಗೌಡಗೆರೆ, ಕುದಾಪುರ ನೇರಲಗುಂಟೆ ಜೋಗಿಹಟ್ಟಿ ನಾಯಕನಹಟ್ಟಿ ಎ. ಮತ್ತು ಬಿ. ಕೇಂದ್ರಗಳನ್ನು ತೆರೆಯಲಾಗಿದೆ.
ಈ ಒಂದು ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ನಮ್ಮ ಆರೋಗ್ಯ ಇಲಾಖೆಯ ಒಬ್ಬ ಮೆಡಿಕಲ್ ಆಫೀಸರ್. ಐದು ಜನ ಮೇಲ್ವಿಚಾರಕರು 37 ಆಶಾ ಕಾರ್ಯಕರ್ತೆಯರು 9 ಅಂಗನವಾಡಿ ಶಿಕ್ಷಕಿರು .
ಈ ಒಂದು ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಕಾರ್ಯನಿರ್ವಹಿಸಲಿದ್ದು.
ಒಟ್ಟು 3284 ಮಕ್ಕಳನ್ನು ಗುರುತಿಸಲಾಗಿದ್ದು. ಇಂದು ಭಾನುವಾರ ಸುಮಾರು 95% ಪೋಲಿಯೋ ಲಸಿಕೆಯನ್ನು ಹಾಕಲಾಗಿದೆ.
ಮಾರ್ಚ್ 3 ರಿಂದ 6ರವರೆಗೆ ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಇನ್ನೂ ಉಳಿದಂತಹ ಮಕ್ಕಳಿಗೆ ನಮ್ಮ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಶಿಕ್ಷಕರು ಮನೆ ಮನೆಗೆ ಭೇಟಿ ನೀಡಿ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿ ಸುಕನ್ಯಾ, ಆರೋಗ್ಯ ನಿರೀಕ್ಷಣಾಧಿಕಾರಿ ಚೈತ್ರ, ಬಿ ಸತೀಶ್, ರಮೇಶ್, ಆಶಾ ಕಾರ್ಯಕರ್ತೆ ಅನುಸೂಯಮ್ಮ, ಅಂಗನವಾಡಿ ಶಿಕ್ಷಕಿ ಶೈಲಜಾ ಇದ್ದರು