ಚಳ್ಳಕೆರೆ ನ್ಯೂಸ್ :
ನೀರಿಗಾಗಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ಎಸ್ಸಿ ಕಾಲೋನಿಯಲ್ಲಿ ಕುಡಿಯುವ ನೀರಿನ
ಸಮಸ್ಯೆ ಉದ್ಭವಿಸಿದ್ದು ಕಾಲೋನಿಯ ಜನರು ಗ್ರಾಮ ಪಂಚಾಯತಿ
ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ತಾಲೂಕಿನ ಕೆಲವು
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ.
ಅದರಂತೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಎಸ್ ಸಿ
ಕಾಲೋನಿಯ ಜನಗಳಿಗೆ ಕುಡಿಯುವ ನೀರಿನ ಸಮಸ್ಯೆ
ಉದ್ಭವಿಸಿದ್ದು ನೀರು ಕೊಡುವಂತೆ ಗ್ರಾಮ ಪಂಚಾಯತಿ ಮುಂದೆ
ಪ್ರತಿಭಟನೆ ನಡೆಸಿದರು.