ನಾಯಕನಹಟ್ಟಿ:: ಸಮೀಪದ ರಾಮಸಾಗರ ಗ್ರಾಮದಲ್ಲಿ ಶ್ರೀ ಗಾದ್ರಿಪಾಲನಾಯಕ ಜಾತ್ರಾ ಮಹೋತ್ಸವದಲ್ಲಿ ಬುಡಕಟ್ಟು ಸಮುದಾಯಗಳು ಆಚರಿಸುವಂತಹ ಧಾರ್ಮಿಕ ವಿಧಿ ವಿಧಾನಗಳು ಮತ್ತು ಆಚರಣೆಗಳು ಸಮಾಜದಲ್ಲಿನ ಸಾಮರಸ್ಯಕ್ಕೆ ಮತ್ತು ಶಾಂತಿಗೆ ಹಿಡಿದಂತ ಕೈಗನ್ನಡಿಯಾಗಿವೆ ಎಂದು ನಿಕಟ ಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.

ಅವರು ಸೋಮವಾರ ಹೋಬಳಿ ರಾಮಸಾಗರದಲ್ಲಿ ಗಾದ್ರಿ ಪಾಲನಾಯಕ ಗುಗ್ಗರಿ ಹಬ್ಬದ ಪೂಜಾ ವಿಧಿ ವಿಧಾನಗಳನ್ನು ಉದ್ದೇಶಿಸಿ ಮಾತನಾಡಿದ ಅವರು ದಕ್ಷಿಣ ಭಾರತದಲ್ಲಿ ಚಿತ್ರದುರ್ಗ ಜಿಲ್ಲೆ ಈ ನಿಟ್ಟಿನಲ್ಲಿ ವಿಶೇಷವಾದ ಸ್ಥಾನಮಾನ ಮತ್ತು ಪರಂಪರೆಯನ್ನು ಹೊಂದಿದೆ ಈ ಬುಡಕಟ್ಟು ಸಮುದಾಯಗಳು ಆಚರಿಸುವಂತಹ ಧಾರ್ಮಿಕ ವಿಧಿ ವಿಧಾನಗಳು ದ್ವಾಪರಯುಗದಲ್ಲಿನ ಆಚರಣೆಗಳಿಗೂ ಸಾಮ್ಯತೆ ಇದೆ
500 ವರ್ಷಗಳ ಹಿಂದಿನ ಕಾಮಗೇತಿ ಕುಲದ ವೀರ ಮದಕರಿ ನಾಯಕನ ವಂಶಸ್ಥರು ಅದಿಯಾಗಿ ಗಾದ್ರಿಪಾಲನಾಯಕರ ಪೂಜಾ ವಿಧಿ ವಿಧಾನಗಳು ಸಾಂಪ್ರದಾಯಗಳು ಮತ್ತು ಆಚರಣೆಗಳು ಭಾಗದಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿವೆ
ಈ ಪೂಜಾ ವಿಧಿ ವಿಧಾನಗಳು ಸಮಾಜದಲ್ಲಿನ ಶಾಂತಿ ಸೌಹಾರ್ದ ಸಾಮರಸ್ಯಕ್ಕೆ ಅತ್ಯಂತ ಪೂರಕವಾಗಿವೆ.
ಈ ಆಚರಣೆಗಳ ಜೊತೆಗೆ ಇಲ್ಲಿಯ ಎಲ್ಲ ಭಕ್ತಾದಿಗಳು ಕೂಡ ನಮ್ಮ ದೈನಂದಿನ ಜೀವನದಲ್ಲಿ ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಮನೆ ಮಾಡಿಕೊಂಡಿದ್ದಾರೆ.
ಈ ಎಲ್ಲಾ ಆಚರಣೆಗಳ ಜೊತೆ ಈ ತಾಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕಿದೆ ಪ್ರತಿಯೊಬ್ಬರೂ ಕೂಡ ತಮ್ಮ ಕುಟುಂಬದಲ್ಲಿನ ಮಕ್ಕಳನ್ನು ಉನ್ನತ ಶಿಕ್ಷಣದ ದಾರಿ ತುಳಿಸಬೇಕಿದೆ ಜನಾಂಗದ ಪರಂಪರೆ ಮತ್ತು ಇತಿಹಾಸವನ್ನು ಇತಿಹಾಸದಲ್ಲಿ ಬರುವಂತಹ ಐತಿಹಾಸಿಕ ವ್ಯಕ್ತಿಗಳ ಸ್ವಾಭಿಮಾನದ ಬೀಜವನ್ನು ಮಕ್ಕಳಲ್ಲಿ ಬಿತ್ತಬೇಕೆಂದು ಮನವಿ ಮಾಡಿದರು.
ಇನ್ನೂ ಶ್ರೀ ಗಾದ್ರಿಪಾಲನಾಯಕ ಸ್ವಾಮಿಯ ಮಾರ್ಚ್ ನಾಲ್ಕರಿಂದ ಮಾರ್ಚ್ 7 ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದ ಸಂಪೂರ್ಣ ಮಾಹಿತಿಯನ್ನು ಸೂರಮನಹಳ್ಳಿಯ ಎಸ್ ಪಿ ಓಬಯ್ಯ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಗಾದಿ ಪಾಲನಾಯಕ ಗುಡಿಕಟ್ಟಿಗೆ ಸೇರಿದ ರಾಮಸಾಗರ ಚೌಳಕೆರೆ ಸೂರಮನಹಳ್ಳಿ ಭೀಮನಕೆರೆ ವರವು ಕುದಾಪುರ ಅಣ್ಣತಮ್ಮಂದಿರು ನೆಂಟರು ಬಾಂಧವರು ಗುರು -ಹಿರಿಯರು ಕುಲದೈವರು ಮತ್ತು
ಕಾಂಗ್ರೆಸ್ ಮುಖಂಡ ಭೀಮನಕೆರೆ ರಮೇಶ್ ಬಾಬು, ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ. ಶಿವಣ್ಣ, ಗ್ರಾಮ ಪಂಚಾಯತಿ ಸದಸ್ಯ ಎಂ ತಿಪ್ಪೇಸ್ವಾಮಿ, ಮುಖಂಡ ಜಯಣ್ಣ, ಸಣ್ಣಪಾಲಯ್ಯ,

About The Author

Namma Challakere Local News
error: Content is protected !!